https://youtu.be/SGdsu7ZJxHU
ಹುಬ್ಬಳ್ಳಿ; ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಚ್ಯುತಿ ತಂದು, ಕಾಂಗ್ರೆಸ್ ನ ಸಂವಿಧಾನ ವಿರೋಧಿ ಸರ್ವಾಧಿಕಾರತ್ವದ ಪ್ರತೀಕವಾಗಿದ್ದ 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾಗದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಮುಂದಾಳತ್ವ ವಹಿಸಿ, ಅಂದಿನ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟಿಸಿ, 18 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ ಹೋರಾಟಗಾರರಾದ ಶ್ರೀ ಹನುಮಂತ ರಾವ್ ಗುರುರಾವ್ ಇನಾಮ್ದಾರ್ ಹಾಗೂ ಅಚ್ಯುತ್ ಲಿಮೆ ಅವರನ್ನು ಹುಬ್ಬಳ್ಳಿಯಲ್ಲಿ ಪ್ರತ್ಯೇಕವಾಗಿ ಅವರ ಮನೆಗಳಿಗೆ ತೆರಳಿ ಭೇಟಿಯಾಗಿ ಸಚಿವ ಜಗದೀಶ್ ಶೆಟ್ಟರ್ ಸನ್ಮಾನಿಸಿದರು .
ಪ್ರಜಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರ ಗೌರವಾರ್ಥವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾ್ ಮಹೇಶ ಟೆಂಗಿನಕಾಯಿ, ನಾಗೇಶ ಕಲಬುರಗಿ, ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ, ಬೀರಪ್ಪ ಕಂಡೇಕರ್, ಸಂಕಲ್ಪ ಶೆಟ್ಟರ್ ಹಾಗೂ ಇನ್ನಿತರೆ ಪ್ರಮುಖರು ಹಾಜರಿದ್ದರು.