ಶಿಗ್ಗಾವಿ: ವಿರೇಶ ಅಜೂರ ಅವರು ನಮ್ಮ ಪಕ್ಷದವರೇ ಬಿಜೆಪಿ ಅವಕಾಶವನ್ನು ನೀಡದಿರುವ ಸಂದರ್ಭದಲ್ಲಿ ಕಾಂಗ್ರೇಸ್ ಸರ್ಪಡೆಯಾಗಿದ್ದರು ಈಗ ಮರಳಿ ಬಿಜೆಪಿಗೆ ಬಂದಿದ್ದಾರೆ ನಮ್ಮವರೇ ನಮ್ಮ ಮನೆಗೆ ಮರಳಿ ಬಂದಿರುವದು ಸಂತಸ ತಂದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಅವರ ನಿವಾಸದಲ್ಲಿ ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಕಾಂಗ್ರೇಸ್ ಮುಖಂಡ ವಿರೇಶ ಆಜೂರ ಮತ್ತು ಅವರ ಬೆಂಬಲಿಗರನ್ನು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಆಜೂರ ಅವರು ಸಂಘಟನಾ ಶಕ್ತಿ ಮತ್ತು ಕ್ರೀಯಾಶೀಲರು, ನಾಡಿನ ಬಗ್ಗೆ,ಸಮೂದಾಯಗಳ ಬಗ್ಗೆ ಅಭಿಮಾನವಿಟ್ಟ ವ್ಯಕ್ತಿ, ಯಾವುದೆ ಪಕ್ಷದಲ್ಲಿದ್ದರು ಒಳ್ಳೆಯ ವ್ಯಕ್ತಿಯನ್ನು ಹೊಂದಿದ ವ್ಯಕ್ತಿ, ನನ್ನ ಹತ್ತಿರ ಬಂದು ಮಾತನಾಡಿದಾಗ ಸಂತೋಷದ ಜೊತೆ ಆಶ್ಚರ್ಯವೂ ಆಯಿತು, ಅವರು ಬಿಜೆಪಿಯ ಕಾರ್ಯಗಳನ್ನು ಮತ್ತು ಜನಬೆಂಬಲ ನೋಡಿ ಬಿಜೆಪಿಯಲ್ಲಿ ನೆಮ್ಮದಿಯ ಕೆಲಸ ನೋಡಿ ಬಂದಿರುವದಾಗಿ ತಿಳಿಸಿದ್ದಾರೆ ಅವರು ಒಪ್ಪಂದ ವಿಲ್ಲದೆ ಪಕ್ಷಕ್ಕೆ ಬಂದಿದ್ದಾರೆ ಸಂತಸ ತಂದಿದೆ ಎಂದರು.
ಪಕ್ಷಕ್ಕೆ ಸೇರ್ಪಡೆಗೊಂಡ ಹಾಲಿ ಕಾಂಗ್ರೇಸ್ ಕಾರ್ಯಾಧ್ಯಕ್ಷ ವಿರೇಶ ಅಜೂರ ಮಾತನಾಡಿ ಪಕ್ಷ ಸಂಘಟನೆಯ ಜೊತೆಗೆ ಜನ ಸೇವೆಗೆ ಬಸವರಾಜ ಬೊಮ್ಮಾಯಿವರ ಜೊತೆ ಕೈ ಜೊಡಿಸುತ್ತೆನೆ ಅವರ ಅಭಿಮಾನದೊಂದಿಗೆ ಅವರ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತೆನೆ ಎಂದರು.