https://youtu.be/1YrNyeDa-kk
ಹುಬ್ಬಳ್ಳಿ; ಸಸಿಗಳನ್ನು ಹೆಚ್ಚು ಹೆಚ್ಚು ನೆಡುವುದರಿಂದ ನಾವು ಉಸಿರಾಡಲು ಹೆಚ್ಚಿನ ಆಮ್ಲಜನಕ ದೊರೆಯುತ್ತದೆ, ಮಕ್ಕಳು ಈಗಿನಿಂದಲೇ ಸಸಿಗಳನ್ನು ನೆಡುವ ಹವ್ಯಾಸವನ್ನು ಬೆಳೆಸಿಕೊಳ್ಳಲಿ, ಜೀವ ಅನಿಲಕ್ಕಾಗಿ ಮರಗಿಡಗಳು ಅಗತ್ಯ ಎಂದು ಧಾರವಾಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಶೆಟ್ಟರ್ ತಿಳಿಸಿದರು.
ನಗರದ ಉಣಕಲ್ ನಲ್ಲಿರುವ ಬಾಲಕರ ಸರಕಾರಿ ಬಾಲಮಂದಿರದಲ್ಲಿ ಎಲ್ಲ ಮಕ್ಕಳೊಂದಿಗೆ ಸಸಿಗಳನ್ನು ನಡೆವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿ ಅವರು ಮಾತನಾಡಿದರು.
ಪ್ರತಿ ಮಗುವಿಗೆ ಒಂದೊಂದು ಸಸಿಯ ಜವಾಬ್ದಾರಿಯನ್ನು ನೀಡಿ, ಅವುಗಳ ಪಾಲನೆ-ಪೋಷಣೆ ಮಾಡಲು ತಿಳಿಸುವುದರು.
ನಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ.ಬ. ಜಾವೂರ್ ಮಾತನಾಡಿ, ಮಕ್ಕಳಲ್ಲಿ ಪರಿಸರದ ಪ್ರಾಮುಖ್ಯತೆಯನ್ನು ಬೆಳೆಸುವಲ್ಲಿ ಇಂತಹ ಪರಿಸರ ದಿನಾಚರಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕ ಮಂಜುನಾಥ ಕುಂಬಾರ ಹಾಗೂ ಎಲ್ಲಾ ಮಕ್ಕಳು, ಸಿಬ್ಬಂದಿಗಳು ಹಾಜರಿದ್ದರು.