https://youtu.be/v6JUmhj1L1g
ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನವನಗರದ
ಶಿವಾನಂದ ನಗರದಲ್ಲಿ ಜನಸಂಘದ ಸಂಸ್ಥಾಪಕರಾದ ಡಾ. ಶಾಮ್ ಮುಖರ್ಜಿ ಅವರ ತ್ಯಾಗ ಬಲಿದಾನ ಅಂಗವಾಗಿ
ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ
ವನ ಮಹೋತ್ಸವ ನಡೆಸಲಾಯಿತು. ನಂತರ ಮಾತನಾಡಿದ ಬಿಜೆಪಿ ಮುಖಂಡೆ ಮಧು ತೊರ್ಡಕರ
ಡಾ. ಶಾಮ್ ಮುಖರ್ಜಿ ಅವರು ಒಬ್ಬ ವ್ಯಕ್ತಿಯಾಗಿರಲ್ಲಿಲ್ಲ ಒಂದು ಶಕ್ತಿಯಾಗಿದ್ದರು. ಜನಸಂಘ ಸ್ಥಾಪನೆ ಮಾಡುವ ಮೂಲಕ ಈ ನಾಡು ಮರೆಯಲಾಗದ ಕಾರ್ಯ ಮಾಡಿದ್ದಾರೆ. ಖಂಡಿತವಾಗಿಯೂ ಅವರು ಸ್ಮರಣೀಯರು ಎಂದರು.
ಕಾರ್ಯಕ್ರಮದಲ್ಲಿ ಮಡಿವಾಳೇಶ್ವರ ಶ್ರೀ, ಮುಖಂಡರಾದ ಅಜ್ಜಪ್ಪ ಹೊರಕೇರಿ, ಕಲ್ಲಪ್ಪ ಹೊರಕೇರಿ, ನಾಗರಾಜ್ ಹರ್ತಿ, ಶಿವಪ್ಪ ಇಸಅಣ್ಣವರ, ಎಸ್ ಎಸ್.ಎಂ. ಪ್ರಭಾಕರ್, ಬಿ.ಜಿ. ಹೊಸಗೌಡ್ರ. ವಿಶ್ವನಾಥ್ ಶಿರವಾಡ,ಸಿದ್ದಣ್ಣ ಶಿವಪ್ಪ, ಪ್ರಮೀಳಾ ಭಂಡಾರಿ. ಇತರರು ಭಾಗವಹಿಸಿದ್ದರು..