ಕುಂದಗೋಳ; ರಾಜ್ಯದಲ್ಲಿ ಕರೋನ ಎರಡನೇ ಅಲೆ ಹಳ್ಳಿಗಳಲ್ಲಿ ದೊಡ್ಡಮಟ್ಟದಲ್ಲಿ ಸ್ಪೋಟ ಗೊಂಡಿತ್ತು. ಈ ವೇಳೆ ಕೆಲವೊಂದು ಗ್ರಾಮಗಳು ಮುಂಜಾಗೃತೆವಯಸಿ ಕರೋನಾದಿಂದ ತಮ್ಮ ತಮ್ಮ ಗ್ರಾಮಗಳನ್ನು ರಕ್ಷಿಸಿ ಕೊಂಡಿದ್ದರು ಅಂತ ಹಳ್ಳಿಗಳಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಹೌದು ಧಾರವಾಡ ಜಿಲ್ಲೆಯ ಕುಂದಗೋಳ ಅಲ್ಲಾಪುರ ಗ್ರಾಮದಲ್ಲಿ ಸುಮಾರು 150 ಮನೆಗಳಿವೆ ಇಲ್ಲಿನ ಗ್ರಾಮಸ್ಥರು ಹಾಗೂ ಗ್ರಾಮದ ಕಾರ್ಯ ವ್ಯಾಪ್ತಿಯ ಮುಖಂಡರು ಸೇರಿ ಕರೋನದಿಂದ ರಕ್ಷಿಸಿಕೊಳ್ಳಲು ಅಲ್ಲಾಪುರ ಟಾಸ್ಕ್ ಫೋರ್ಸ್ ಸಮಿತಿ ರಚಿಸಿಕೊಂಡು ಇಡಿ ಗ್ರಾಮಕ್ಕೆ ಪ್ರತಿದಿನವೂ ಔಷಧಿ ಸಿಂಪಡನೆ ಮನೆಮನೆಗೂ ಮಾಸ್ಕ್ ಸ್ಯಾನಿಟೈಜರ್ ವಿತರಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದರು ಅಲ್ಲದೆ ಯಾರಿಗಾದರೂ ಅನಾರೋಗ್ಯವಾದರೆ ಗ್ರಾಮದಲ್ಲಿಯೇ ಕೋವಿಡ ಟೆಸ್ಟ್ ಮಾಡಿಸಲಾಗುತ್ತಿತ್ತು ವಿಶೇಷ ಅಂದರೆ ಈ ಗ್ರಾಮದಲ್ಲಿ ಹೊಲಗಳಲ್ಲಿ ಕೆಲಸ ಮಾಡುವಾಗಲೂ ಮಾಸ್ಕ್ ಕಡ್ಡಾಯವಾಗಿ ಧರಿಸುತ್ತಾರೆ. ಇದರಿಂದ ಒಂದೇ ಒಂದು ಕರೋನಾ ಕೆಎಸ್ ಇಲ್ಲದ ಮಾದರಿ ಹಳ್ಳಿಯಾಗಿ ಅಲ್ಲಾಪುರ ಗ್ರಾಮ ಮಹಾ ಸಾಧನೆ ಮಾಡಿದೆ. ಜೊತೆಗೆ ಈ ಗ್ರಾಮ ಮೂರನೇ ಎಲೆಯನ್ನು ಎದುರಿಸೋಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಂಡು ಇಡಿ ರಾಜ್ಯಕ್ಕೆ ಮಾದರಿಯಾಗಿದೆ.
