ಹುಬ್ಬಳ್ಳಿ; ಕೋವಿಡ್ 19 ಸಾಂಕ್ರಾಮಿಕ ರೋಗ ತಡೆಯಲು ಲಾಕ್‌ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾದ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರವು 2 ಸಾವಿರ ರೂ.ಗಳ ಪರಿಹಾರ ಧನ ಘೋಷಿಸಿದೆ.ಈ ಪರಿಹಾರ ಸೌಲಭ್ಯವು ಅಸಂಘಟಿತವಲಯದ ಕಾರ್ಮಿಕರಾದ ಅಗಸರು,ಕ್ಷೌರಿಕರು,ಗೃಹ ಕಾರ್ಮಿಕರು,ಟೈಲರ್‌ಗಳು,ಮೆಕ್ಯಾನಿಕ್,ಚಿಂದಿ ಆಯುವವರು,ಹಮಾಲರು,ಅಕ್ಕಸಾಲಿಗರು,ಕಮ್ಮಾರರು,ಕುಂಬಾರರು ,ಭಟ್ಟಿ ಕಾರ್ಮಿಕರು ಸೇರಿದಂತೆ ಸುಮಾರು 11 ವರ್ಗಗಳ ವೃತ್ತಿಯವರಿಗೆ ದೊರೆಯುತ್ತದೆ.ಸೇವಾಸಿಂಧು ಪೋರ್ಟಲ್ ಮೂಲಕ ಜುಲೈ 31 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ತಾವು ವಾಸಿಸುತ್ತಿರುವ ವ್ಯಾಪ್ತಿಯ ಮಹಾನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯತಿಗಳ ಕಂದಾಯ ಅಧಿಕಾರಿಗಳು, ಹಿರಿಯ ಆರೋಗ್ಯ ಅಧಿಕಾರಿಗಳು,ಆರೋಗ್ಯ ನಿರೀಕ್ಷಕರು,ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು,ಕಾರ್ಯದರ್ಶಿಗಳು. ತಾಲೂಕು ಮಟ್ಟದಲ್ಲಿ ತಹಸೀಲ್ದಾರರು,ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರು,ಕಾರ್ಮಿಕ ಅಧಿಕಾರಿಗಳು,ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಯಾವುದೇ ಇಲಾಖೆಯ ಪತ್ರಾಂಕಿತ ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪತ್ರ ಲಗತ್ತಿಸಬೇಕು. ಹಮಾಲಿ ವೃತ್ತಿಯಲ್ಲಿರುವ ಕಾರ್ಮಿಕರು ತಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರಕ್ಕೆ ಸಂಬಂಧಿಸಿದ ಇಲಾಖೆ,ಮಂಡಳಿ ಅಥವಾ ನಿಗಮದ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು.
ಹೆಚ್ಚಿನ ವಿವರಗಳಿಗೆ ಹುಬ್ಬಳ್ಳಿ ಕಾರ್ಮಿಕ ಅಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ 0836-2356322,2356503 ಅಥವಾ ಕಾರ್ಮಿಕ ಅಧಿಕಾರಿಗಳ ಮೊಬೈಲ್ ಸಂಖ್ಯೆ 9480068995, 9449273963 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.