ಬೆಳಗಾವಿಯ 4.9 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಆರೋಪಿ ಕಿರಣ್​ ವೀರನಗೌಡರಗೆ ಉತ್ತರ ಕರ್ನಾಟಕ ಭಾಗದ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಕಿರಣ್ ಪರಿಚಯ

Spread the love

ಹುಬ್ಬಳ್ಳಿ: ಬೆಳಗಾವಿಯ 4.9 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಪ್ರಕರಣದ ಬೆನ್ನಲ್ಲೇ ಕಿರಣ್​ ವೀರನಗೌಡರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.‌ ಪೊಲೀಸರ ವೇಷದಲ್ಲಿ ಈತ ಸುಲಿಗೆಗೆ ಇಳಿದಿದ್ದ ಎನ್ನುವ ಮಾಹಿತಿಯನ್ನು ಅನ್ಯಾಯಕೊಳ್ಳಗಾದ ಮಹಿಳೆ ತಡವಾಗಿ ಬಹಿರಂಗಪಡಿಸುವ ಮೂಲಕ‌ ಈತನ ಇನ್ನೊಂದು ಮುಖವನ್ನು ತೆರೆದಿಟ್ಟಿದ್ದಾಳೆ.
ಡಿಸಿಪಿ ಅಂತಾ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದನಂತೆ ಕಿರಣ್ ವೀರನಗೌಡರ. ಕಳೆದ ವರ್ಷ ಹುಬ್ಬಳ್ಳಿಯ ಪ್ರತಿಷ್ಠಿತ ಮಾಲ್​ವೊಂದರ ಮೇಲೆ ಅಸಲಿ ಪೊಲೀಸರ ರೀತಿ ನಕಲಿ ಪೊಲೀಸರು ದಾಳಿ‌ ನಡೆಸಿದ್ದರು. ಇದರ ರೂವಾರಿನೇ ಕಿರಣ್ ವೀರನಗೌಡರ. ತಾನು ಡಿಸಿಪಿಯೆಂದು ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದ. ಈತನಿಗೆ ಹುಬ್ಬಳ್ಳಿಯ ಓರ್ವ ಎಎಸ್​ಐ, ಪಿಸಿ ಸಾಥ್ ನೀಡಿದ್ದರು ಎಂದು ಪಾರ್ಲರ್​ವೊಂದರ ಮಹಿಳೆ ಆರೋಪಿಸಿದ್ದಾರೆ.ನಕಲಿ ಪೊಲೀಸರ ಜೊತೆ ಸೇರಿ ಅಸಲಿ ಪೊಲೀಸರು ಎಸಿಪಿ, ಇನ್ಸ್​ಪೆಕ್ಟರ್ ಅಂತ ಹೇಳಿ ಪಾರ್ಲರ್​ನಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಅಪಾರ್ಟ್​​ಮೆಂಟ್​ನಲ್ಲಿ ಕೂಡಿ ಹಾಕಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮಾಲೀಕ ಹಣ ನೀಡಿದ ಮೇಲೆ ಬಿಟ್ಟು ಕಳುಹಿಸಿದ್ದರು. ಈ ಪ್ರಕರಣದಲ್ಲಿ ಹುಬ್ಬಳ್ಳಿಯ ಬಸವರಾಜ ಡಾಸ್ಕೋನವರ್,ಅನಿಲ್ ಹುಗ್ಗಿ ಭಾಗಿಯಾಗಿದ್ದರು‌ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಬಸವರಾಜ್ ಡಾಸ್ಕೋನವರ್ ಈಗ ಎಎಸ್​ಐ ಹಾಗೂ ಅನಿಲ್ ಪಿಸಿಯಾಗಿ ಕಾರ್ಯನಿರ್ಹಿಸುತ್ತಿದ್ದಾರೆ. ಇವರು ಇಲಾಖೆಗೆ ಮೋಸ ಮಾಡಿ ನಕಲಿ ಪೊಲೀಸರ ಜೊತೆ ಶಾಮೀಲಾಗಿ ಈ ಹಿಂದಿನ ಕಮೀಷನರ್​ಗೆ ಮಾಮೂಲಿ‌ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply