ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ ಅವರ ನೇತೃತ್ವದಲ್ಲಿ ಒಂದು ವರ್ಷದ ಹಿಂದೇ ನನ್ನನ್ನು ಬಿಜೆಪಿಯಿಂದ ಅಮಾನತು ಮಾಡಿದ್ದರು. ಆದರೆ ಈಗ ಆ ಅಮಾನತು ಆದೇಶವನ್ನು ಹಿಂಪಡೆದು ಪಕ್ಷಕ್ಕೆ ಸೇರೆಸಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರ ವಿರುದ್ಧ ಈ ಹಿಂದೆ ನಾನು ಮಾಡಿದ್ದ ಆರೋಪಗಳನ್ನು ಹಿಂಪಡೆದು ಬಿಜೆಪಿ ಹೈಕಮಾಂಡ್ ನಿರ್ದೇಶನದ ಮೇರೆಗೆ ಪಕ್ಷದಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಯಾವುದೇ ಸಮಸ್ಯೆಗಳು ಬಂದರೂ ನಾವು ಪಕ್ಷದಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ. ಅಲ್ಲದೇ ಪಕ್ಷದ ಶಿಸ್ತು ನಮ್ಮ ಧೇಯ ಎಂದು ಅವರು ಹೇಳಿದರು.