Breaking News

ಬಿಜೆಪಿ ಅಶಿಸ್ತನ್ನು ಸಹಿಸೋದಿಲ್ಲ – ಪಕ್ಷ ವಿರೋಧಿಗಳ ವಿರುದ್ಧ ಶಿಸ್ತುಕ್ರಮ ಖಚಿತ – ಮಹೇಶ್ ಟೆಂಗಿನಕಾಯಿ.

Spread the love

ರಾಜ್ಯದಲ್ಲಿ ಪ್ರತಿಯೊಂದು ರಾಜಕೀಯ ಬೆಳವಣಿಗೆಗಳನ್ನು ಹಾಗೂ ಪಕ್ಷದಲ್ಲಿ ನಡೆಯಿತ್ತಿರುವ ಬೆಳವಣಿಗೆಗಳನ್ನು ಕೂಡಾ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯ ಉಸ್ತವಾರಿಗಳು ಗಮನಿಸುತ್ತಿದ್ದಾರೆ, ಬಿಜೆಪಿ ಅಶಿಸ್ತನ್ನು ಎಂದಿಗೂ ಸಹಿಸುವುದಿಲ್ಲಾ ಪಕ್ಷ ವಿರೋಧಿಗಳ ವಿರುದ್ಧ ಶಿಸ್ತುಕ್ರಮ ಖಚಿತ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಹೇಳಿದ್ದರು.
ಈ ಕುರಿತು ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕಳೆದ ಎರಡುವಾರದಿಂದ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರು, ರಾಜ್ಯ ಬಿಜೆಪಿ ಉಸ್ತವಾರಿ ಅರುಣ ಸಿಂಗ್‌ರವರು ಮೂಲಕ ವರದಿಯನ್ನು ಪಡೆಕೊಂಡಿದ್ದಾರೆ. ಅಲ್ಲದೆ ಪಕ್ಷದ ವಿರುದ್ಧ ಮಾತನಾಡುವವರಿಗೆ ನೋಟಿಸನ್ನು ಕೂಡಾ ನೀಡಿ ಖಡಖ್ ಸಂದೇಶವನ್ನು ನೀಡಿದ್ದಾರೆ ಜೊತೆಗೆ ಪಕ್ಷದ ವಿರುದ್ಧ ಯಾರೂ ಕೂಡಾ ನಡೆದುಕೊಳ್ಳಬಾರದು, ಹಾಗೇ ಪಕ್ಷದ ವಿರುದ್ಧ ಬಹಿರಂಗ‌ ಮಾಧ್ಯಮ‌ ಹೇಳಿಕೆಗಳನ್ನು ನೀಡಬಾರದು ಎಂದು ಸ್ಪಷ್ಟ ಸಂದೇಸವನ್ನು ರಾಜ್ಯ ಬಿಜೆಪಿ ನಮ್ಮ ನಾಯಕರುಗಳಿಗೆ ನೀಡಿದ್ದಾರೆ ಎಂದರು. ಇನ್ನೂ ಧಾರವಾಡ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ ಶೆಟ್ಟರವರ ಜಿಲ್ಲೆಯಲ್ಲಿ ಯಾರು ಕೆಮ್ಮುದರೂ ಅದೂ ನಮ್ಮ ಬೂಡಕ್ಕೆ ಬರುತ್ತೆ ಎಂಬ ಹೇಳಿಕೆಗೆ ಪ್ರತಿಕ್ರೆ ನೀಡಿ, ಹಾಗೇನೂ ಇಲ್ಲಾ, ಆ ರೀತಿಯ ಪರಿಸ್ಥಿತಿ ‌ಜಿಲ್ಲೆಯಲ್ಲಿ ಇಲ್ಲಾ ಎಂದು‌ ಹೇಳಿದರು. ಅಲ್ಲದೆ ದೇಶದಲ್ಲಿ ಕೊರೊನಾ ಎರಡನೇ ಅಲ್ಲೆಯಲ್ಲಿ ಆಕ್ಸಿಜನ್ ‌ಮಹತ್ವ ಎಷ್ಟಿದೆ ಎಂಬುವುದಿ ತಿಳಿಯಲಾಗಿದೆ. ಜೊತೆಗೆ ಮುಂದಿನ ಪಿಳಿಗೆಗಳ ಉತ್ತಮ ನೈಸರ್ಗಿ ಆಕ್ಸಿಜೆನ್ ನೀಡುವ ಉದೇಶದಿಂದ, ಜನಸಂಘ ಸಂಸ್ಥಾಪಕ ಶಾಮ್‌ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ ಅಂಗವಾಗಿ, ರಾಜ್ಯಾದ್ಯಂತ 11 ಲಕ್ಷ ಸಸಿಗಳನ್ನು ನೇಡುವ ಯೋಜನೆಯನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದೆ, ಅಲ್ಲದೆ ನೆಟ್ಟ ಸಸಿಗಳನ್ನು ಒಂದು ವರ್ಷ ಪಾಲನೆ ಪೋಷಣೆಗೆ ಒತ್ತು ನೀಡಲಾಗುತ್ತದೆ ಎಂದು ಪಕ್ಷದ ಕಾರ್ಯಕ್ರಮ ಕುರಿತು ವಿವರಿಸಿದರು.


Spread the love

About Karnataka Junction

[ajax_load_more]

Check Also

ಮಳೆ ಹಾನಿ ಪರಿಹಾರ ನೀಡಲು ಸರ್ಕಾರ ಸದಾ ಸಿದ್ದ ಏನ್ ಹೆಚ್ ಕೋನರಡ್ಡಿ

Spread the love ಹುಬ್ಬಳ್ಳಿ; ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆ, ರಸ್ತೆ ಹಾಗೂ ಸೇತುವೆಗಳು …

Leave a Reply

error: Content is protected !!