Breaking News

ಕೃಷಿ ಜಮೀನಿನಲ್ಲಿಮಿತ್ರ ಬೆಳೆ ಅಳವಡಿಸಿಕೊಳ್ಳಿ

Spread the love

ಹುಬ್ಬಳ್ಳಿ; ಧಾರವಾಡ ಜಿಲ್ಲೆಯ
ಕುಂದಗೋಳ ಕೃಷಿ ಜಮೀನಿನಲ್ಲಿಮಿತ್ರ ಬೆಳೆ ಅಳವಡಿಸಿಕೊಳ್ಳಿ ಎಂದು ಕುಂದಗೋಳ ಸಹಾಯಕ ಕೃಷಿ ನಿರ್ದೇಶಕ ಭಾರತಿ ಮೆಣಸಿನಕಾಯಿ ಹೇಳಿದರು ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಆಯೋಜಿಸಿದ ಕಡಲೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ನಮ್ಮ ಇಲಾಖೆಯಲ್ಲಿ ಈಗಾಗಲೇ ಕೃಷಿ ಭಾಗ್ಯ ಯೋಜನೆ ಎಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಬಹುದು. ರೈತರಿಗೆ ನೀರಾವರಿ ಮಾಡಿಕೊಳ್ಳಲು ಪೈಪು ಹಾಗೂ ಇನ್ನಿತರ ಎತ್ರೋಪಕರಣಗಳು ಇದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಅಂಬಿಕಾ ಮಹೇಂದ್ರ ಕರ್ ಮಾತನಾಡಿ ನಮ್ಮ ಇಲಾಖೆಯಿಂದ ವಿವಿಧ ತಳಿಗಳ ಕಡಲೆ ಹಾಗೂ ಜೋಳ ಬೀಜಗಳನ್ನು ಬಿತ್ತನೆ ಮಾಡಿ ಕಟಾವು ಮಾಡುತ್ತಿದ್ದೀರಿ ಯಾವ ತಳಿ ಹೆಚ್ಚು ಇಳುವರಿ ಕಾಣುತ್ತದೆ ಮುಂದಿನ ವರ್ಷಗಳಲ್ಲಿ ಹೆಚ್ಚು ಇಳುವರಿ ಬಂದ ಬೀಜಗಳನ್ನು ನಮ್ಮ ಇಲಾಖೆಯಲ್ಲಿ ತರುವಂತ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು ಈ ಸಂದರ್ಭದಲ್ಲಿ ರತ್ನ ಭಾರತ ರೈತ ಸಮಾಜದ ತಾಲೂಕ ಅಧ್ಯಕ್ಷ ಬಸವರಾಜ ಯೋಗಪ್ಪನವರ ಮಾತನಾಡಿ ಕುಂದಗೋಳ ಕೃಷಿ ಇಲಾಖೆಯಿಂದ ಸಾಕಷ್ಟು ಸಹಾಯಧನವನ್ನು ಈಗಾಗಲೇ ನಮ್ಮ ರೈತರು ಪಡೆದುಕೊಂಡಿದ್ದಾರೆ ಆದರೆ ಹಳೆಯ ಕೃಷಿ ಭಾಗ್ಯದಲ್ಲಿ ಕೆರೆಗಳನ್ನು ಕಡಿಸಿಕೊಂಡ ರೈತರಿಗೆ ಹೂ ತೆಗೆಯುವ ಕೆಲಸ ಮಾಡಿಕೊಡಬೇಕು ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು ಈ ಸಂದರ್ಭದಲ್ಲಿ ಎಸ್ ಪಿ ಕುಲಕರ್ಣಿ ಫಕೀರಪ್ಪ ಮೂಲಿಮನಿ ಶ್ರೀದೇವಿ ಆಲೂರಿ ಶ್ರೀಕಾಂತ್ತ ತಳವಾರ ರಾಘವೇಂದ್ರ ಕುಸುಗಲ್ ಸಕ್ರಪ್ಪ ಕಮ್ಮಾರ ರಾಜು ಮಲ್ಲಿಗವಾಡ ಗಂಗಪ್ಪ ನಾಗರಹಳ್ಳಿ ಮಂಜುನಾಥ ಮಲ್ಲಿಗವಾಡ ಚನ್ನಬಸಪ್ಪ ಸಿದ್ದಣ್ಣವರ ಶಿವಶಂಕ್ರಪ್ಪ ಹೊಸಳ್ಳಿ ಎಲ್ಲಪ್ಪ ಸಿದ್ದನವರ ತಿರ್ಕಪ್ಪ ಯೋಗಪ್ಪನವರ ವಿರುಪಾಕ್ಷ ಸಂಸಿ ಬಾಹುಬಲಿ ಮಲ್ಲಿಗವಾಡ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸಾರಾ ಬೈಕ್ ರೆಂಟಲ್ ಆರಂಭ

Spread the love*ಹುಬ್ಬಳ್ಳಿ:* ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸಾರಾ ಬೈಕ್ ರೆಂಟಲ್ ಆರಂಭಗೊಂಡಿದ್ದು ಪ್ರವಾಸಿಗರು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು …

Leave a Reply

error: Content is protected !!