ಇಂದು ಬೆಳಗ್ಗೆಯಿಂದ ರಾಯರ ದರ್ಶನಕ್ಕೆ ಭಕ್ತರಿಗೆ ಅವಕಾಶ

Spread the love

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಜೂನ್​​ 22ರಿಂದ ರಾಯರ ದರ್ಶನ ಆರಂಭವಾಗಲಿದೆ ಎಂದು ಶ್ರೀಮಠದ ವ್ಯವಸ್ಥಾಪಕ ವೆಂಕಟೇಶ್ ಜೋಷಿ ಮಾಹಿತಿ ನೀಡಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿ ಮಠ ಬಂದ್ ಮಾಡಿ ಭಕ್ತರಿಗೆ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಇದೀಗ ಆರೋಗ್ಯ ಇಲಾಖೆ ಮಾರ್ಗಸೂಚಿಗಳ ಅನುಗುಣವಾಗಿ ಮಠದ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರು ಭಕ್ತರಿಗೆ ರಾಯರ ಮೂಲ ಬೃಂದಾವನ ‌ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ.
22ಮಠದ ಅಧಿಕೃತ ಪ್ರಕಟಣೆಜೂನ್ 22ರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 4ರಿಂದ ರಾತ್ರಿ 9 ಗಂಟೆಯವರೆಗೆ ಮೂಲ ಬೃಂದಾವನ ದರ್ಶನವನ್ನು ಭಕ್ತರು ಪಡೆಯಬಹುದಾಗಿದೆ. ಅಲ್ಲದೇ ಶ್ರೀಮಠಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಸರ್ಕಾರದ ನಿರ್ದೇಶನದ್ವನಯ ಕೋವಿಡ್ ನಿಯಮಗಳನ್ನ ಪಾಲಿಸಬೇಕಿದೆ.
ಇದರ ಜೊತೆಗೆ ದರ್ಶನಕ್ಕೆ ಆಗಮಿಸಲು ಸಾಧ್ಯವಾಗದ ಭಕ್ತರು ಶ್ರೀಮಠದ www.srsmatha.org/online ಲಿಂಕ್ ಮೂಲಕ ದರ್ಶನ ಪಡೆಯಬಹುದು ಹಾಗೂ ಸೇವೆಗಳನ್ನು ಸಲ್ಲಿಸಬಹುದು ಎಂದು ವೆಂಕಟೇಶ್ ಜೋಷಿ ತಿಳಿಸಿದ್ದಾರೆ.


Spread the love

About Karnataka Junction

    Check Also

    ಶ್ರೀ ಬಸವೇಶ್ವರರ ತತ್ವಾದರ್ಶಗಳು ದಾರಿದೀಪ- ಹುಚ್ಚಪ್ಪ ರೂಗಿ

    Spread the loveಹುಬ್ಬಳ್ಳಿ: ಬಸವ ಜಯಂತಿ ಅಂಗವಾಗಿ ಮಲ್ಲಿಕಾರ್ಜುನ ಗಚ್ಚಿ ನ ಬಸವೇಶ್ವರ ದೇವಸ್ಥಾನ ದ ವತಿಯಿಂದ ಬಸವೇಶ್ವರ ದೇವಸ್ಥಾನಕ್ಕೆ …

    Leave a Reply

    error: Content is protected !!