Breaking News

ಸಪ್ನಾ ಬುಕ್ ಹೌಸ್ ನಲ್ಲಿ ಆರ್ಟ್ ಫೆಸ್ಟಿವಲ್, ವಿಜೇತರಿಗೆ ಬಹುಮಾನ ವಿತರಣೆ

Spread the love

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಸಪ್ನಾ ಬುಕ್ ಹೌಸ್ ಹಾಗೂ ರೊಸ್ಟಮ್ ಡೈರೀಸ್ ಇವುಗಳ ಸಂಯು ಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹುಬ್ಬಳ್ಳಿ ಆರ್ಟ್ ಫೆಸ್ಟಿವಲ್ ಉದ್ಘಾಟನೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಫೆಸ್ಟಿವಲ್ ಗಾಗಿ ಸುಮಾರು 2500 ಚಿತ್ರಕಲೆಗಳು ಸ್ವೀಕೃತವಾಗಿದ್ದವು. ಇದರಲ್ಲಿ 200 ಚಿತ್ರಕಲೆಗಳನ್ನು ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಜನವರಿ 31ರ ವರೆಗೆ ಪ್ರದರ್ಶನಕ್ಕೆ ಮುಕ್ತವಾಗಿದೆ. ಸಾರ್ವಜನಿಕರು ವೀಕ್ಷಿಸಬಹುದು.
ಶಾಸಕ ಮಹೇಶ ಟೆಂಗಿನಕಾಯಿ ಅವರು ಆರ್ಟ್ ಗ್ಯಾಲರಿ ಉದ್ಘಾಟನೆ ಮಾಡಿದರು. ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಫೆಸ್ಟಿವಲ್ ನಿರ್ಣಾಯಕರಾದ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುರುಸಿದ್ದಪ್ಪ ಮಲ್ಲಾಪುರ, ಆರ್.ಬಿ. ಗರಗ, ಕೆ.ವಿ. ಶಂಕರ, ಮಂಜುನಾಥ ಕಾರಿಗಾರ, ಮಂಜುಳಾ ಕೆ.ವಿ. ಶಕುಂತಲಾ ವೆರ್ಣೇಕರ ಉಪಸ್ಥಿತರಿದ್ದರು.
ಲಕ್ಷ್ಮಿ ಮಾಲ್ ಮಾಲೀಕ ಕಾಶೀನಾಥ ಚಾಟ್ಟಿ, ಸಪ್ನಾ ಬುಕ್‌ ಹೌಸ್‌ ವ್ಯವಸ್ಥಾಪಕ ರು ಎಂ.ವಿ. ಇತರರು ಪಾಲ್ಗೊಂಡಿದ್ದರು.
ಆರ್ಟ್ ಫೆಸ್ಟಿವಲ್ ನ 16 ವರ್ಷದ ಒಳಗಿನ ವಿಜೇತರು ಇಂತಿದ್ದಾರೆ. ಇಫಾ ಅಮೀನ ಎಂ. ಪ್ರಥಮ, ದಿವ್ಯಾ ಆರ್. ಪವಾರ ರನ್ನರ್ ಅಪ್, ವಿಸಾಲಿ ಎಸ್. ತೃತೀಯ ಬಹುಮಾನ ಪಡೆದರು.
16 ವರ್ಷ ಮೇಲ್ಪಟ್ಟವರಲ್ಲಿ ಶ್ರೇಯಸ್ ಅತ್ತಿಮರದ ಪ್ರಥಮ, ಹರಿಶ ಟಿಕಾರೆ ದ್ವೀತಿಯ ಹಾಗೂ ವಿನಾಯಕ ನಾಗರಬೆಟ್ಟ ತೃತೀಯ ಮತ್ತು ಪವನ ಎಂ. ನಾಯಕ ಅವರಿಗೆ ವಿಶೇಷ ಬಹುಮಾನ ನೀಡಲಾಯಿತು.


Spread the love

About Karnataka Junction

[ajax_load_more]

Check Also

ಹಾಡುಹಕ್ಕಿ ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಇನ್ನಿಲ್ಲ

Spread the loveಜಾನಪದ ಹಾಡಿಗೆ ಹೊಸ ಆಯಾಮ ಕೊಟ್ಟಿದ್ದ ಜನಪದ ಹಕ್ಕಿ : ಅನಾರೋಗ್ಯಕ್ಕೆ ಒಳಗಾಗಿದ್ದ ಹಾಡುಹಕ್ಕಿ ಪದ್ಮಶ್ರೀ‌ ಪುರಸ್ಕೃತೆ …

Leave a Reply

error: Content is protected !!