Breaking News

ನಕ್ಸಲ್ ಕಾರ್ಯಾಚರಣೆ ಬಗ್ಗೆ ಶಸ್ತ್ರಾಸ್ತ್ರಗಳ ಬಗ್ಗೆ ಸಿಎಂ ಜನರಿಗೆ ಮಾಹಿತಿ ನೀಡಬೇಕು; ಪ್ರಹ್ಲಾದ ಜೋಶಿ ಆಗ್ರಹ

Spread the love

 

ಹುಬ್ಬಳ್ಳಿ: ನಕ್ಸಲರ ಶರಣಾಗತಿ ವಿಚಾರದ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು. ಇದು ಎಷ್ಟು ದಿನದಿಂದ ಪ್ರಕ್ರಿಯೆ ನಡೆಯುತ್ತಿತ್ತು..? ಇದು ಬಹಳ‌ ತರಾತುರಿಯಲ್ಲಿ ನಡೆಯಿತು ಅನ್ನೋ‌ ಭಾವನೆ ಎಲ್ಲರಲ್ಲೂ ಇದೆ. ಬೇರೆ ಬೇರೆ ಭಾಗಗಳಲ್ಲಿ ಶರಣಾಗತಿ ಆದ ನಕ್ಸಲರು ಅವರ ಬಳಿ ಇದ್ದ ಶಸ್ತಾಸ್ತ್ರಗಳನ್ನ ಒಪ್ಪಿಸಿದ್ದಾರೆ. ನಕ್ಸಲರ ಶರಣಾಗತಿಗೆ ನಾನು ವಿರೋಧ ಮಾಡುತ್ತಿಲ್ಲ. ನಕ್ಸಲ್ ರ ಪ್ಯಾಕೇಜ್ ವ್ಯವಸ್ಥೆ ಎಲ್ಲಾ ಸರ್ಕಾರದಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಕ್ಸಲ್ ಚಳುವಳಿಯನ್ನು ಬೇರು ಸಮೇತ ಹೊಸುಕಿ ಹಾಕುವ ಚಿಂತನೆ ಕೇಂದ್ರ ಸರ್ಕಾರ ಮಾಡುತ್ತಿದೆ. ಹೀಗಾಗಿ ತರಾತುರಿಯಲ್ಲಿ ಆರು ಜನ ನಕ್ಸಲ್ ಶರಣಾಗತಿಯಾಗಿದ್ದಾರೆ. ಶರಣಾಗತಿಯಾದ ನಕ್ಸಲ್ ಎಷ್ಟು ಶಸ್ತ್ರಾಸ್ತ್ರಗಳು ಒಪ್ಪಿಸಿದ್ದಾರೆ..? ಏನು ಮಹತ್ವದ ಮಾಹಿತಿ ನೀಡಿದ್ದಾರೆ ಅದನ್ನು ರಾಜ್ಯದ ಜನತೆಗೆ ಸಿಎಂ ತಿಳಿಸಲಿ ಎಂದರು.

ನಕ್ಸಲರಿಗೆ ವಿದೇಶಿದಿಂದ ಹಣದ ಸಹಾಯವಾಗುತ್ತದೆ. ಇದರಲ್ಲಿ ನಮ್ಮ ರಾಜ್ಯದ ಯುವಕರು ಸಿಲುಕಿದ್ದಾರೆ. ನಕ್ಸಲ್ ಪ್ಯಾಕೇಜ್ ಇತರೇ ನಕ್ಸಲ್ ರಿಗೆ ಸಲುಗೆಯಾಗದಿರಲಿ. ಆರು ಜನ ನಕ್ಸಲ್ ಶರಾಣಾದ್ರೆ ರಾಜ್ಯದಲ್ಲಿ ನಕ್ಸಲ್ ಚಳುವಳಿ ಮುಗಿತು ಅಂತ ಬಿಂಬಿಸಲಾಗುತ್ತಿದೆ. ಆ್ಯಂಟಿ ನಕ್ಸಲ್ ತಂಡದ ಕಾರ್ಯಾಚರಣೆ ನಿಲ್ಲಿಸುತ್ತೇವೆ ಎನ್ನುವುದು ಎಷ್ಟರಮಟ್ಟಿಗೆ ಸರಿ..? ಎಂದು ಪ್ರಶ್ನಿಸಿದರು.

ಬಿ.ವೈ ವಿಜಯೇಂದ್ರ ಡಿನ್ನರ್ ಪಾರ್ಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ವಿಜಯೇಂದ್ರ ಯಾವುದೇ ಡಿನ್ನರ್ ಪಾರ್ಟಿ ಅಂತಾ ಕರೆದಿಲ್ಲ. ಪಕ್ಷದ ಸಭೆಗಾಗಿ ಕರೆದಿದ್ದರು ನನಗೂ ಸಹ ಕರೆದಿದ್ದರು ನಾನೂ ಹೋಗಿದ್ದೆ ಎಂದು ಅವರು ಸ್ಪಷ್ಟನೆ ನೀಡಿದರು.


Spread the love

About Karnataka Junction

[ajax_load_more]

Check Also

*ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಹೈ ಅಲರ್ಟ್: ಈದ್ಗಾ ಮೈದಾನದಲ್ಲಿ ಪೊಲೀಸ್ ಪರೇಡ್*

Spread the loveಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ …

Leave a Reply

error: Content is protected !!