ಪ್ರಥಮ ಸಂಸತ್ತಿನಲ್ಲಿ ದಲಿತ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಅಂಬೇಡ್ಕರ್ ಅವರ ಹೆಸರೇ ಇರಲಿಲ್ಲ.- ಮೇಗಾಲಾಲ
ಹುಬ್ಬಳ್ಳಿ ;ಕಾಂಗ್ರೆಸ್ ಸುಳ್ಳು ಹೇಳುತ್ತಾ ಮತದಾರರ ಮೇಲೆ ಪ್ರಭಾವ ಬೀರುವ ಕೆಲಸ ಮಾಡುತ್ತಾ ಬಂದಿದೆ. ಜನ ಸಂಘ ಮತ್ತು ಬಿಜೆಪಿ ಮೊದಲಿನಿಂದಲೂ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅನುಸರಿಸಿಕೊಂಡು ಬಂದಿದೆ’ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆಯ ಸಚಿವ ಅರ್ಜುನರಾಮ್ ಮೇಘವಾಲ್ ಹೇಳಿದರು.
ನಗರದ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಘಟನೆ ಇಲ್ಲಿಯ ಇಂದಿರಾ ಗಾಜಿನಮನೆ ಆವರಣದಲ್ಲಿಂದು ಹಮ್ಮಿಕೊಂಡಿದ್ದ ‘ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರಥಮ ಸಂಸತ್ತಿನಲ್ಲಿ ದಲಿತ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಅಂಬೇಡ್ಕರ್ ಅವರ ಹೆಸರೇ ಇರಲಿಲ್ಲ. ಎಲ್ಲ ರಾಜ್ಯದ ದಲಿತ ಮುಖಂಡರು ಒತ್ತಾಯಿಸಿದ ಪರಿಣಾಮ ಅವರಿಗೆ ಸಚಿವ ಸ್ಥಾನ ಸಿಗುವಂತಾಯಿತು. ದಲಿತ ವಿರೋಧಿ ಆಡಳಿತಕ್ಕೆ ಬೇಸತ್ತು ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ರಾಜಿನಾಮೆ ಪತ್ರದಲ್ಲಿಯೇ ಇದನ್ನು ಅವರು ಉಲ್ಲೇಖಿಸಿದ್ದಾರೆ. ಎರಡನೇ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಷಡ್ಯಂತ್ರ ನಡೆಸಿ ಸೋಲಿಸಿತು. ಆಗ ಇಂದಿರಾಗಾಂಧಿ ಸಂಭ್ರಮಾಚರಣೆ ಮಾಡಿದ್ದರು. ಇದೆಲ್ಲವೂ ದಾಖಲೆಯಲ್ಲಿದೆ. ಅವರು ಮರಣ ಹೊಂದಿದಾಗ ಸ್ಮಾರಕ ನಿರ್ಮಾಣಕ್ಕೆ ಜಾಗ ಸಹ ನೀಡದೆ ಅವಮಾನಿಸಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘