ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಮದುವೆ ಮನೆಯಲ್ಲಿ ವಿಶ್ವ ಯೋಗ ದಿನಾಚರಣೆ- ಮದುಮಗ ವಿವಿಧ ಯೋಗಗಳ ಭಾವಭಂಗಿಯಲ್ಲಿ ಹಸಮಣೆಗೆ
ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಯೋಗ ಪಟು ಡಾ. ಶ್ರೀಧರ ಹೊಸಮನಿ ಮದುವೆ ಮನೆಯಲ್ಲಿ ವಿಶ್ವ ಯೋಗ ದಿನಾಚರಣೆ- ಮದುಮಗ ವಿವಿಧ ಯೋಗಗಳ ಭಾವಭಂಗಿಯಲ್ಲಿ ಸೋಮವಾರ ಹಸಮಣೆಗೆ ಏರಿದರು.
ಸಾಮಾನ್ಯವಾಗಿ
ಮದುವೆ ಅಂದರೆ ಸಾಕು ಅಲ್ಲಿ ಸಂಬಂಧಿಗಳ ಓಡಾಟ, ಬೀಗರದ ಜೊತೆಗೆ ಕುಶಲೋಚಾರ ಹಾಗೂ ಮಕ್ಕಳ ಸಂಭ್ರಮಗಳು ಹೆಚ್ಚಾಗಿಯೇ ಕಂಡು ಬರುತ್ತವೆ, ಆದರೆ ಇಲ್ಲೊಂದು ಅಪರೂಪದಲ್ಲಿ ಅಪರೂಪ ಮದುವೆ ನಡೆದಿದೆ.
ಈ ಎಲ್ಲ ಸಂಭ್ರಮ ಸಂತಸಗಳಿಗೆ ತಿಲಾಂಜಲಿ ಹೇಳಿ ಮದುವೆಗೆ ಬಂದಂತಹ ಸಂಬಂಧಿಗಳಿಗೆ ಹಾಗೂ ಸ್ಥಳಿಯರಿಗೆ ಯೋಗದ ವಿವಿಧ ಆಸನಗಳನ್ನು ಮಾಡಿಸುವ ಮೂಲಕ, ಯೋಗದ ಮಹತ್ವವನ್ನು ಸಾರಿ ಸಾರಿ ಹೇಳಿದರು. ಗಾಯತ್ರಿಯವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲೀಡುವ ಸಂದರ್ಭದಲ್ಲಿ ವಿಶ್ವ ಯೋಗ ದಿನಾಚರಣೆ, ಹಿನ್ನೆಲೆಯಲ್ಲಿ ಮದುವೆಗೆ ಬಂದಂತಹ ಸಂಬಂಧಿಗಳಿಗೆ ಹಾಗೂ ಸ್ಥಳಿಯರಿಗೆ ಯೋಗ ಮಾಡಿಸುವ ಮೂಲಕ ಯೋಗದ ಜಾಗೃತಿ ಮೂಡಿಸಿ ಆಲೋಚನೆಯನ್ನು ಹೊಂದಿದ್ದರು. ಇದಕ್ಕೆ ಗಾಯತ್ರಿಯವರು ಕೂಡಾ ಸಂತೋಷದಿಂದ ಒಪ್ಪಿಗೆ ನೀಡಿ, ಡಾ.ಶ್ರೀಧರವರ ಯೋಗ ಜಾಗೃತಿಗೆ ಕೈಜೋಡಿಸಿ ಇಂದು ಮನೆಯ ಮುಂಭಾಗದಲ್ಲಿ ವಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ನವಜೋಡಿಗಳು ಅರ್ಥಪೂರ್ಣವಾಗಿತ್ತು.