Breaking News

ಹುಧಾ ಪಾಲಿಕೆಯವಾರ್ಡ್ ನಂ. 49 ರಿಂದ 59 ಹಾಗೂ 67 ಪ್ರದೇಶಗಳಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ

Spread the love

https://youtu.be/K-riAzonPQA

ಹುಬ್ಬಳ್ಳಿ; ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸವನ್ನು ಸೋಮವಾರ ಹುಬ್ಬಳ್ಳಿಯ ಹೊಸ ಹುಬ್ಬಳ್ಳಿ ಭಾಗದ ವಾರ್ಡ್ ನಂ. 49 ರಿಂದ 59 ಹಾಗೂ 67 ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿತ್ತು .
ಹೊಸ ಹುಬ್ಬಳ್ಳಿ ಭಾಗದ ವಾರ್ಡ್ ನಂ. 49 ರಿಂದ 59 ಹಾಗೂ 67 ಬರುವ ಪ್ರಮುಖರು ,ಮಂಡಳದ
ಪದಾಧಿಕಾರಿಗಳು ,ಪ್ರಮುಖರು , ಮೋರ್ಚಾ ಪದಾಧಿಕಾರಿಗಳು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ಯೋಗ ಗುರು ಪಂಚಲಿಂಗಪ್ಪ ಕವಲೂರ ಯೋಗಾಭ್ಯಾಸ ಹೇಳಿಕೊಟ್ಟರು.
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಪ್ರಭು ನವಲಗುಂದಮಠ ಅಧ್ಯಕ್ಷತೆಯಲ್ಲಿ , ಮುಖ್ಯ ಅತಿಥಿಗಳಾಗಿ ವಿಭಾಗೀಯ ಬಿಜೆಪಿ ಸಹ ಸಂಘಟನಾ ಕಾರ್ಯದರ್ಶಿ ರಾಜಕುಮಾರ ಬಸವಾ , ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ರಾಜ್ಯ ಬಿಜೆಪಿ ಸಹ ಸಂಚಾಲಕರಾದ ಶ್ರೀ ವೀರೇಶ ಸಂಗಳದ ಆಗಮಿಸಿ, ಯೋಗದ ಮಹತ್ವವನ್ನು ತಿಳಿಸಿದರು .
ಕಾರ್ಯಕ್ರಮವನ್ನು ಅನುಪ ಬಿಜವಾಡ ಸ್ವಾಗತಿಸಿ , ನಿರೂಪಿಸಿ ವಂದಿಸಿದರು .


Spread the love

About gcsteam

    Check Also

    ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ

    Spread the loveಹುಬ್ಬಳ್ಳಿ- ರಾಮಲಿಂಗೇಶ್ವರ ದೇವಸ್ಥಾನ ಬಿ.ಆರ್.ಟಿ.ಎಸ್. ಯೋಜನೆಯ ಅನ್ವಯ ಸ್ಥಳಾಂತರ ಆಗುವ ವಿಷಯ ಬೇಸರದ ಸಂಗತಿ ಆದರೂ ಸರಕಾರ …

    Leave a Reply