ಬೆಂಗಳೂರು : ಕೋವಿಡ್ ಸೋಂಕಿತರ ಟೆಸ್ಟ್‌ನಲ್ಲಿ ಪಾಸಿಟಿವಿಟಿ ದರ ಶೇ. 5 ಕ್ಕಿಂತಲೂ ಕಡಿಮೆ ದಾಖಲಾದ ಆರು ಜಿಲ್ಲೆಗಳಲ್ಲಿ ರಾಜ್ಯ ಸರಕಾರ ಅನ್ ಲಾಕ್ ಘೋಷಣೆ ಮಾಡಿದೆ. ಹೀಗಾಗಿ 16 ಜಿಲ್ಲೆಗಳ ಜೊತೆಗೆ ಇದೀಗ ಮತ್ತೆ ಆರು ಜಿಲ್ಲೆಗಳು ಅನ್ಲಾಕ್ ಆಗಿವೆ. ಇಂದಿನಿಂದಲೇ ಈ ಆದೇಶ ಜಾರಿಯಲ್ಲಿರಲಿದೆ.
ಶಿವಮೊಗ್ಗ, ಉಡುಪಿ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಗೊಳಿಸಲಾಗಿದೆ. ಅನ್ಲಾಕ್ ಪ್ರಕಾರ ಈ ಆರು ಜಿಲ್ಲೆಗಳಲ್ಲಿ ಬೆಳಗ್ಗೆಯಿಂದ ಸಂಜೆ 5 ಗಂಟೆಯವರೆಗೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಜನಸಂಚಾರ ಮತ್ತು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು. ಜುಲೈ 5ರ ಬೆಳಗ್ಗೆ 5ಗಂಟೆ ತನಕ ಈ ಅನ್ಲಾಕ್ ಜಾರಿಯಲ್ಲಿರುತ್ತದೆ.ರಾಜ್ಯ ಸರ್ಕಾರದ ಮಹತ್ವದ ಆದೇಶಕಳೆದ ವಾರ ಅನ್ಲಾಕ್ ಘೋಷಣೆ ಮಾಡುವಾಗ ಈ ಆರು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತಲೂ ಹೆಚ್ಚಿಗೆ ಇದ್ದಿದ್ದರಿಂದ ಅನ್ಲಾಕ್ ಮಾಡಿರಲಿಲ್ಲ. ಆದರೆ, ನಿನ್ನೆ ಭಾನುವಾರ (ಜೂನ್ 20) ರಂದು ಕೋವಿಡ್ ಟೆಸ್ಟ್‌ನಲ್ಲಿ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ದಾಖಲಾಗಿದ್ದರಿಂದ ಇಂದಿನಿಂದಲೇ ಅನ್ವಯವಾಗುವಂತೆ ಅನ್ಲಾಕ್ ಪ್ರಕಟಿಸಿ ಕಂದಾಯ ಇಲಾಖೆ ಪ್ರಧಾನಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.ಯಾವೆಲ್ಲ ಜಿಲ್ಲೆಗಳು ಅನ್ಲಾಕ್?ಮೊದಲ ಹಂತದಲ್ಲಿ ರಾಯಚೂರು, ಕೊಪ್ಪಳ, ಕಲಬುರಗಿ, ರಾಮನಗರ, ಉತ್ತರ ಕನ್ನಡ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಹಾವೇರಿ, ಬೀದರ್, ಬೆಳಗಾವಿ, ಕೋಲಾರ, ಯಾದಗಿರಿ ಹಾಗೂ ಬಾಗಲಕೋಟೆ ಅನ್ಲಾಕ್ ಆಗಿವೆ. ಇದೀಗ ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಅನ್ಲಾಕ್ ಆಗಿವೆ.
Check Also
ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ
Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …