ಧಾರವಾಡ: ಕೆ ಎಸ್ ಆರ್ ಟಿ ಸಿ ನೌಕರರು ಹಾಗೂ ಆಟೋ ಚಾಲಕರಿಗೆ ಹಿರಿಯ ವಕೀಲ, ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಗೌರಾವಾಧ್ಯಕ್ಷ, ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಅವರು ಆಹಾರ ಕಿಟ್ ವಿತರಣೆ ಮಾಡಿದರು. ಸೋಮವಾರ ಧಾರವಾಡದಲ್ಲಿ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಿದರು.
ಈ ಸಮಯದಲ್ಲಿ ಮಾತನಾಡಿದ ನೀರಲಕೇರಿ ಅವರು, ಕಳೆದು ತಿಂಗಳನಿಂದ ಅಗತ್ಯ ಇರುವ ವರ್ಗಕ್ಕೆ ದಿನಸಿ ಕಿಟ್ ಗಳನ್ನು ವಿರತಣೆ ಮಾಡಲಾಗುತ್ತಿದೆ. ಅಕ್ಷಯ ಪಾತ್ರೆ ಫೌಂಡೇಶನ್ ಜೊತೆ ವಿತರಣೆ ಮಾಡಿಕೊಂಡು ಬಂದಿದ್ದೇವಿ. ಇಂದು ಸಾರಿಗೆ ನೌಕರರಿಗೆ ಸುಮಾರು 1200 ಕಿಟ್ ವಿತರಣೆ ಮಾಡಲಾಗಿದೆ. ನಾಳೆ, ಹುಬ್ಬಳ್ಳಿ ಸೇರಿದಂತೆ ಬೇರೆ ಕಡೆಯಲ್ಲಿ ವಿತರಣೆ ಮಾಡಲಾಗುವುದು. ಇದರ ಜೊತೆಗೆ ಇಂದು ಸಂಜೆ ರಂಗಮಂದಿರದಲ್ಲಿನ ಕಲಾವಿದರಿಗೆ ಕಿಟ್ ಗಳನ್ನು ವಿತರಣೆ ಮಾಡಲಾಗುವುದು. ಕೊರೊನಾ ಸಮಯದಲ್ಲಿ ಜನರು ಜೀವನ ಮಾಡುವುದು ಕಷ್ಟವಾಗಿದೆ. ಸರಕಾರ ಸ್ಪಂಧಿಸುತ್ತಿಲ್ಲ. ಅಧಿಕಾರಿಗಳು ಹೀನಾಯ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಅಕ್ಷಯ ಪಾತ್ರೆ ಫೌಂಡೇಶನ್ ಹಾಗೂ ಶೆರ್ ಇಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಆಹಾರ ಕಿಟ್ ಗಳನ್ನು ನೀಡಲಾಗುತ್ತಿದೆ ಎಂದರು.