ಹುಬ್ಬಳ್ಳಿ ; ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗೆ ತುರ್ತಾಗಿ ಎ ಪಾಸಿಟಿವ್ ರಕ್ತ ಬೇಕಾಗಿತ್ತು ಕರ್ತವ್ಯ ಮೇಲೆ ಇದ್ದ ಆಸ್ಪತ್ರೆ
ಸಿಬ್ಬಂದಿ ಪ್ರಕಾಶ ಗೋಕಾವಿ ಸ್ಪಂದಿಸಿ ಲೈಫ್ ಲೈನ್ ರಕ್ತನಿಧಿಯಲ್ಲಿ ರಕ್ತದಾನ ಮಾಡಿ ಸಹಾಯ ಮಾಡಿ ಮಹಾದಾನಿಯಾಗಿ ಮಾನವೀಯತೆ ಮೆರೆದರು. ಇಲ್ಲಿಯವರೆಗೆ ನಾನು 12 ಬಾರಿ ಸಾಮಾನ್ಯ ಮತ್ತು 4ಬಾರಿ ಪ್ಲೇಟ್ಲೆಟ್ ರಕ್ತದಾನ ಮಾಡಿದ ಸಾರ್ಥಕತೆ ನನ್ನದು. ವಿಶ್ವ ಯೋಗ ದಿನದಂದು ರಕ್ತದಾನ ಮಾಡಿದ್ದು ನನಗೆ ವಿಶೇಷ ಅನಿಸಿತ ಎಂದ ಪ್ರಕಾಶ ಗೋಕಾವಿ ರಕ್ತವನ್ನು ಯಾರು ಕೃತಕವಾಗಿ ಉತ್ಪತ್ತಿ ಮಾಡಲು ಸಾಧ್ಯವಿಲ್ಲ ಅದಕ್ಕೆ ನಮ್ಮಿಂದಲೇ ಇಂತಹ ರಕ್ತದಾನ ಮೂಲಕ ಸಾವು ಬದುಕಿನ ನಡುವೆ ಹೋರಾಡುವ ರೋಗಿಗೆ ಸಹಾಯ ಮಾಡಲು ಸಾಧ್ಯ ಅದಕ್ಕೋಸ್ಕರ ಎಲ್ಲರೂ ರಕ್ತದ ಕೋರಿಕೆಗೆ ಸ್ಪಂದಿಸಿ ರಕ್ತದಾನ ಮಾಡಿ ಎಂದು ವಿನಂತಿ ಮಾಡಿದರು..ಈ ಸಂದರ್ಭದಲ್ಲಿ ಮಂಜುನಾಥ ದೇಸಾಯಿ ಉಪಸ್ಥಿತರಿದ್ದರು ಮುಂತಾದವರಿದ್ದರು.
Check Also
ಮಳೆ ಹಾನಿ ಪರಿಹಾರ ನೀಡಲು ಸರ್ಕಾರ ಸದಾ ಸಿದ್ದ ಏನ್ ಹೆಚ್ ಕೋನರಡ್ಡಿ
Spread the love ಹುಬ್ಬಳ್ಳಿ; ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆ, ರಸ್ತೆ ಹಾಗೂ ಸೇತುವೆಗಳು …