ಹುಬ್ಬಳ್ಳಿ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ 1,00,000 ಅರ್ಬನ್ ಕ್ರೂಸರ್ ಹೈರೈಡರ್ ಯುನಿಟ್‌ಗಳನ್ನು ಮಾರಾಟ ಮಾಡಿರುವುದಾಗಿ ಘೋಷಿಸಿದೆ. ಈ ಕುರಿತು ಕಂಪನಿಯ ಸಿಇಓ ನಗರದಲ್ಲಿ ಮಾಹಿತಿ ನೀಡಿದ್ದು
2022ರ ಜುಲೈನಲ್ಲಿ ಬಿಡುಗಡೆಯಾದ ಅರ್ಬನ್ ಕ್ರೂಸರ್ ಹೈರೈಡರ್ ಟೊಯೋಟಾದ ವಿಶ್ವ ದರ್ಜೆಯ ಹೈಬ್ರಿಡ್ ತಂತ್ರಜ್ಞಾನ, ಅಪೂರ್ವ ವಿನ್ಯಾಸ, ಪ್ರೀಮಿಯಂ ಸೌಕರ್ಯ ಮತ್ತು ಅಸಾಧಾರಣ ಕಾರ್ಯಕ್ಷಮತೆ ಹೊಂದಿತ್ತು. ಅದರಿಂದಲೇ ಜನಪ್ರೀತಿ ಗಳಿಸಿತ್ತು. ಸೆಲ್ಫ್ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ನಿಯೋ ಡ್ರೈವ್ ಮತ್ತು ಸಿ ಎನ್ ಜಿ ಪವರ್ ಎಂಬ ಮೂರು ಪವರ್‌ಟೇನ್‌ಗಳಲ್ಲಿ ಈ ವಾಹನ ಲಭ್ಯವಿದೆ ಎಂದಿರುವ
ಈ ಕುರಿತು ಮಾತನಾಡಿದ ಕಂಪನಿಯ ಸೆಲ್ಸ್ ಸರ್ವೀಸ್ ಯೂಸ್ಡ್ ಕಾರ್ ಬಿಸಿನೆಸ್ ವಿಭಾಗದ ಉಪಾಧ್ಯಕ್ಷ ಶಬರಿ ಮನೋಹರ್, “ಅರ್ಬನ್ ಕ್ರೂಸರ್ ಹೈರೈಡರ್ಗೆ ಭಾರತೀಯ ಗ್ರಾಹಕರಿಂದ ದೊರೆತಿರುವ ಸಕಾರಾತ್ಮಕ ಪ್ರತಿಕ್ರಿಯೆಯು ಭಾರತೀಯರ ಬದಲಾಗುತ್ತಿರುವ ಆದ್ಯತೆಗಳಿಗೆ ಅನುಗುಣವಾಗಿ ನವೀನ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಈ ಮೈಲಿಗಲ್ಲು ಕೇವಲ ಒಂದು ಸಂಖ್ಯೆಯಲ್ಲ, ಬದಲಿಗೆ ಸುಸ್ಥಿರತೆ, ಕಾರ್ಯಕ್ಷಮತೆ ಮತ್ತು ಗ್ರಾಹಕರ ತೃಪ್ತಿಗೆ ಆದ್ಯತೆ ನೀಡುವ ಎಸ್ಯುವಿ ತಂತ್ರಜ್ಞಾನದ ಹೊಸ ಯುಗದ ಆರಂಭದ ಸೂಚನೆಯಾಗಿದೆ. ಅರ್ಬನ್ ಕ್ರೂಸರ್ ಹೈರೈಡರ್ ಹೊಸತನ ಮತ್ತು ಪರಿಸರ ಪ್ರಜ್ಞೆಯ ಮೂಲಕ ಟೊಯೋಟಾದ ಬದಲಾವಣೆಯ ಪರಂಪರೆಯನ್ನು ಎತ್ತಿಹಿಡಿದಿದೆ. ವಿಶೇಷವಾಗಿ ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ನಾವು ಕೃತಜ್ಞರಾಗಿದ್ದೇವೆ” ಎಂದು ಹೇಳಿದರು.
Check Also
ತಾವು ಎಲ್ಲಿ ಇರುತ್ತಿರಿ ಅಲ್ಲಿಂದಲೇ ಖರೀದಿ ಮಾಡಬಹುದು, ಯಾವಾಗ ಅಂತಾ ಡಿಟೇಲ್ಸ್ ಇದೆ ನೋಡಿ ಇಲ್ಲಿ
Spread the loveಲಿಡ್ಕರ್ ಇನ್ನು ಮುಂದೆ ಇ- ಕಾಮರ್ಸ್ ನಲ್ಲಿ ಸಿಗುತ್ತದೆ ತಾವು ಎಲ್ಲಿ ಇರುತ್ತಿರಿ ಅಲ್ಲಿಂದಲೇ ಖರೀದಿ ಮಾಡಬಹುದು, …