Breaking News

ಉರ್ದು ಶಾಲೆ,ಭಾಷೆ ಸಮಸ್ಯೆಗಳಿಗೆ ಪರಿಹಾರಕ್ಕೆ ಶ್ರಮ- ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮಹ್ಮದ್ ಅಲಿ ಖಾಝಿ

Spread the love

.ಹುಬ್ಬಳ್ಳಿ: ಉರ್ದು ಕಲಿಯದೆ ಜನರಿಗೆ ಉರ್ದು ಅಕಾಡೆಮಿ ತರಬೇತಿ ನೀಡುವ ಮೂಲಕ ಆ ಭಾಷೆಯ ಜ್ಞಾನ ಧಾರೆ ಎರೆಯುವುದು ಹಾಗೂ ಶಾಲೆಗಳಲ್ಲಿ ಉರ್ದು ಭಾಷೆ ಉಳಿಸಿ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮಹ್ಮದ್ ಅಲಿ ಖ್ವಾಜಾ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು
ಉತ್ತರ ಕರ್ನಾಟಕ ಭಾಗದಲ್ಲಿನ ಗದಗ,‌ ಹಾವೇರಿ , ಹುಬ್ಬಳ್ಳಿ ಧಾರವಾಡ ಸೇರಿದಂತೆ ಮುಂತಾದ ಭಾಗಗಳಲ್ಲಿನ ಉರ್ದು ಕವಿಗಳಿಗೆ ಪ್ರೋತ್ಸಾಹ ಹಾಗೂ ಉರ್ದು ಶಾಲೆಗಳಲ್ಲಿನ ಸಮಸ್ಯೆ ಕುರಿತು ಚರ್ಚೆ ಅದಕ್ಕೆ ಪರಿಹಾರ ಸಹ ಕಂಡುಕೊಳ್ಳಲಾಗುವುದು ಎಂದ ಅವರು ಕರ್ನಾಟಕ ಸರಕಾರ ಸಾಕಷ್ಟು ಪ್ರೋತ್ಸಾಹ ಉರ್ದು ಅಕಾಡೆಮಿಗೆ ಕೊಟ್ಟಿದ್ದು ಇದರ ಸದುಪಯೋಗ ಆಗಲಿ ಎಂಬುದು ನಮ್ಮ ಉದ್ದೇಶ ಎಂದರುಮ
ಉರ್ದು ಭಾಷೆ,ಸಾಹಿತ್ಯ ನಶಿಸಿ ಹೋಗುವ ಕಾಲದಲ್ಲಿ ಇಂದು ಪುನರ್‌ಜನ್ಮ ಪಡೆದುಕೊಳ್ಳುತಿದ್ದು ಇದಕ್ಕೆ ಉರ್ದು ಅಕಾಡೆಮಿ ಸಾಕಷ್ಟು ಪ್ರೋತ್ಸಾಹ ಕೊಡುತ್ತದೆ ಎಂದರು. ಉರ್ದುಭಾಷೆ ಸಾಮರಸ್ಯದ ಭಾಷೆ. ಸರ್ವಧರ್ಮೀಯರು ಮಾತನಾಡುವ ಭಾಷೆ ಆದ್ದರಿಂದ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.e


Spread the love

About Karnataka Junction

[ajax_load_more]

Check Also

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ – ರಾಜಣ್ಣ ಕೊರವಿ

Spread the loveಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ ಆಗಿದೆ ಎಂದು ಶ್ರೀ …

Leave a Reply

error: Content is protected !!