ಹುಬ್ಬಳ್ಳಿ : ನಗರದ ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಗರಗ ರಸ್ತೆಯ ‘ಕೊರವಿ ಗ್ರೀನ್ ಸಿಟಿ’ ಭೂಮಿ ಪೂಜೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, 125 ಎಕರೆ ವಿಸ್ತೀರ್ಣದ ಈ ಬಡವಾಣೆಯಲ್ಲಿ ಮೈದಾನ, ಶಾಲೆ, ಆಸ್ಪತ್ರೆ, ಈಜುಗೊಳ, ಮಾರುಕಟ್ಟೆ ಸೇರಿದಂತೆ ವಸತಿ ಪ್ರದೇಶಕ್ಕೆ ಬೇಕಾಗುವ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. 1,600ಕ್ಕೂ ಹೆಚ್ಚು ಪ್ಲಾಟ್ ಗಳಿವೆ ಎಂದರು.
ಈಗಾಗಲೇ ಕೇಶ್ವಾಪುರ, ಗೋಪನಕೊಪ್ಪ, ಭೈರಿದೇವರಕೊಪ್ಪ, ಉಣಕಲ್ಲ, ಹೆಬ್ಬಳ್ಳಿ ರಸ್ತೆಯಲ್ಲಿ 22 ಬಡಾವಣೆಗಳನ್ನು ನಿಮಾಣ ಮಾಡಿದ್ದೇವೆ. ಈ ಬಾರಿ ಬೃಹತ್ ಬಡವಾಣೆ ನಿರ್ಮಿಸಲಾಗಿದೆ. ಇಲ್ಲಿನ ಪ್ಲಾಟ್‌ಗಳನ್ನು ಜನಸಾಮಾನ್ಯರೂ ಖರೀದಿಸಲು ಅನುಕೂಲವಾಗುವಂತೆ ಸುಲಭ ಕಂತುಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ಪ್ಲಾಟ್ ವಾಸ್ತು ಪ್ರಕಾರ ಇದ್ದು, ಸದಾ ನೀರು ದೊರೆಯುವಂತೆ ಬೋರ್‌ವೆಲ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಈ ಬಡಾವಣೆಗೆ ಹೊಂದಿಕೊಂಡು ಟಾಟಾ ಕಂಪನಿ, ಮಾರ್ಕೆಪೋಲೊ, ಟಾಟಾ ಹಿಟಾಚಿ ಕಾರ್ಖಾನೆ, ಬೇಲೂರು ಇಂಡಸ್ಟ್ರೀಜ್ ಏರಿಯಾ, ಐಐಟಿ ಶಿಕ್ಷಣ ಕೇಂದ್ರ, ಹೈ ಕೋರ್ಟ್ ಇದ್ದು, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಅತಿ ಸಮೀಪದಲ್ಲಿ ಇದೆ ಎಂದು ಹೇಳಿದರು.
ಭೂಮಿ ಪೂಜೆ ಸಮಾರಂಭದ ಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಮುರಾಘಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಎರಡೆತ್ತಿನಮಠದ ಸಿದ್ದಲಿಂಗ ಸ್ವಾಮೀಜಿ ಹಾಗೂ ಅಮ್ಮಿನಬಾವಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಚಿವ ಸಂತೋಷ ಲಾಡ್, ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಇನ್ನಿತರ ಜನಪ್ರತಿನಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಾ. ವಿಶ್ವನಾಥ ಕೊರವಿ, ಶಶಿಧರ ಕೊರವಿ, ಈರಣ್ಣಗೌಡ ಪಾಟೀಲ, ಸುನಂದ ಉಪಸ್ಥಿತರಿದ್ದರು
Check Also
ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ
Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …