ಹುಬ್ಬಳ್ಳಿ: ವಿದ್ಯಾಭಾರತಿ ಪೌಂಡೇಶನ್ ಶಿಕ್ಷಣ ಸಂಸ್ಥೆಯ ಐಬಿಎಂಆರ್ ಮಹಾವಿದ್ಯಾಲಯದ ರಜತ ಸಂಭ್ರಮದ ಪ್ರಯುಕ್ತ `ಶಿಕ್ಷಣ ಮತ್ತು ಪರಿಸರದ’ಬಗ್ಗೆ ಅರಿವು ಮೂಡಿಸುವ ಸಲುವಾಗಿ ನ.೧೬ ರಂದು ಬೆಳಗ್ಗೆ ೭ ಗಂಟೆಗೆ ವಾಕಾಥಾನ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ವಿನಯಚಂದ್ರ ಮಹೇಂದ್ರಕರ ತಿಳಿಸಿದರು.
ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, `ಸಾಕ್ಷರತಾ ಅರಿವು ಮತ್ತು ಹಸಿರು ಉಸಿರು’ ಎಂಬ ಧ್ಯೇಯ ವಾಕ್ಯದಡಿ ಸುಮಾರು ೪ ಕಿ.ಮೀ ನಡಿಗೆ ಆಯೋಜಿಸಲಾಗಿದೆ. ಅಂತಾರಾಷ್ಟಿçÃಯ ಕ್ರೀಡಾಪಟು ದೇವಪ್ಪ ಮೋರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಕ್ಷಯ ಕಾಲನಿಯ ಕ್ಯಾಪಸ್ ನಿಂದ ಹೊರಡಲಿರುವ ಜಾಥ, ತೋಳನಕೆರೆ, ಸಿದ್ಧೇಶ್ವರ ಪಾಕ್ ಮಾರ್ಗವಾಗಿ ಮರಳಿ ಕ್ಯಾಂಪಸ್ ಸೇರಲಿದೆ ಎಂದರು.
೧೯೯೯ ರಲ್ಲಿ ಕೇವಲ ೧೮ ವಿದ್ಯಾರ್ಥಿಗಳಿಂದ ಆರಂಭವಾದ ಶಿಕ್ಷಣ ಸಂಸ್ಥೆ, ಇಂದು ಹೆಮ್ಮರವಾಸಗಿ ಬೆಳೆದಿದೆ. ಪಿಯುಸಿ ವಾಣಿಜ್ಯ, ವಿಜ್ಞಾನ, ಕಲಾ, ವೃತ್ತಿಪರ, ವ್ಯವಹಾರ ನಿರ್ವಹಣೆ ಮತ್ತು ವಾಣಿಜ್ಯ ಸ್ನಾತಕೋತ್ತರ ವಿಭಾಗಗಳು ಸೇರಿದಂತೆ ೧೪ ಪ್ರೋಗ್ರಾಮ್ ಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಇದರೊಟ್ಟಿಗೆ ೨೦೨೫ಕ್ಕೆ ಕಾನೂನು ಮಹಾವಿದ್ಯಾಲಯ ಮತ್ತು ಸಿಬಿಎಸ್‌ಸಿ ಶಾಲೆಯನ್ನು ಆರಂಭಿಸುವ ಯೋಜನೆ ಹೊಂದಲಾಗಿದೆ ಎಂದರು.
ನುರಿತ ಹಾಗೂ ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವ ಸಿಬ್ಬಂದಿ ವರ್ಗವು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸೇವೆ ಸಲ್ಲಿಸುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಗುಣಮಟ್ಟದ್ದಾಗಿದ್ದು, ಉತ್ತಮ ಅಂಕಗಳೊAದಿಗೆ ಉತ್ತೀರ್ಣರಾಗುತಿದ್ದಾರೆ. ವಿದ್ಯಾಭಾರತಿ ಫೌಂಡೇಶನ್ ಸಂಸ್ಥೆ ಬೆಂಗಳೂರು, ಅಹ್ಮದಾಬಾದ್ ಮತ್ತು ದೆಹಲಿಯಲ್ಲಿ ಶಾಖೆಗಳನ್ನು ಹೊಂದಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಶಿಕ್ಷಣವನ್ನು ಕೊಡುವ ವ್ಯವಸ್ಥೆಯನ್ನು ಐಬಿಎಂಆರ್ ಮಹಾವಿದ್ಯಾಲಯಗಳಲ್ಲಿ ನಿರಂತರವಾಗಿ ಮುನ್ನಡೆಯುತ್ತಿದೆ ಎಂದರು.
ಸಂಸ್ಥೆಯ ನಿರ್ದೇಶಕ ಡಾ.ಶಿವಪ್ರಕಾಶ ನಾಯಕ ಮಾತನಾಡಿ, ಐಬಿಎಂಆರ್ ಶಿಕ್ಷಣ ಸಂಸ್ಥೆಯು ರಾಷ್ಟಿçÃಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯಿಂದ ಬಿ+ ಶ್ರೇಣಿ ಪಡೆದುಕೊಂಡಿದ್ದು, ಶಿಕ್ಷಣದ ಶ್ರೇಷ್ಠ ಗುಣಮಟ್ಟದಿಂದಾಗಿ ಉತ್ತರ ಕರ್ನಾಟಕದಲ್ಲಿ ತನ್ನದೆಯಾದ ಛಾಪು ಮೂಡಿಸಿದೆ. ಇದರೊಟ್ಟಿಗೆ ಸಮಾಜಮುಖಿ ಸೇವೆ ಮಾಡುತ್ತಿರುವ ಸಂಸ್ಥೆಯು ಹಳಿಯಾಳ ತಾಲೂಕಿನ ಕರಡೊಳ್ಳಿ ಮತ್ತು ಹುಬ್ಬಳ್ಳಿ ತಾಲೂಕಿನ ಶರೆವಾಡ ಗ್ರಾಮದ ಶಾಲೆಗಳನ್ನು ದತ್ತು ಪಡೆದು ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿದೆ ಎಂದರು.
ನಿರ್ದೇಶಕ ಪ್ರದೀಪ ಶರ್ಮಾ, ಡೀನ್ ಸದಾನಂದ ಹಾವಣಗಿ ಸೇರಿದಂತೆ ಕಾಲೇಜು ಸಿಬ್ಬಂದಿ ಇದ್ದರು.
Check Also
*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ
Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …