ಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಹಾಯ, ಸಹಕಾರ, ಬೆಂಬಲ ಯಾವತ್ತೂ ಮರೆಯುವುದಿಲ್ಲ. ಕಾರ್ಯಕರ್ತರು ದಣಿವರಿಯದೇ ಕೆಲಸ ಮಾಡಿ ನನ್ನನ್ನು ಗೆಲ್ಲಿಸುತ್ತ ಬಂದಿದ್ದಾರೆ, ಈಗಲೂ ಭರತ್ ಬೊಮ್ಮಾಯಿ ಅವರನ್ನು ನನಗಿಂತ ಹೆಚ್ಚು ಮತಗಳಿಂದ ಗೆಲ್ಲಿಸಿಕೊಂಡು ಬರುವ ಶಕ್ತಿ ಕಾರ್ಯಕರ್ತರಲ್ಲಿ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಸಚಿವರು ಸೇರಿ ರಾಜ್ಯ ಸರ್ಕಾರವೇ ಕ್ಷೇತ್ರದಲ್ಲಿ ನಿಂತಿದೆ. ಆದರೆ, ಕಾರ್ಯಕರ್ತರು ಕಾಂಗ್ರೆಸ್ನವರ ಹುನ್ನಾರಕ್ಕೆ ಬಲಿಯಾಗಬಾರದು. ಶಿಗ್ಗಾಂವಿ ಸವಣೂರಿನ ಅಸ್ಮಿತೆಯನ್ನು ಉಳಿಸಿಕೊಳ್ಳಿ, ಮತ್ತೊಮ್ಮೆ ಬಿಜೆಪಿ ಪರವಾಗಿ ಜನರ ಮನೆಗೆ ಹೋಗಿ ಭರತ ಪರವಾಗಿ ಮತ ಕೇಳಿ ಎಂದು ವಿನಂತಿಸಿಕೊಂಡರು.
ಪ್ರವಾಹ ಬಂದಾಗ ರೈತರಿಗಾಗಿ ಎರಡು ಪಟ್ಟು ಪರಿಹಾರ ಒದಗಿಸಿದೆ. ಕ್ಷೇತ್ರದ ನೀರಾವರಿಗೆ 25 ಸಾವಿರ ಕೋಟಿ ರೂ. ಕೊಟ್ಟಿದ್ದೇನೆ. ಸಿಎಂ ಸಿದ್ದರಾಮಯ್ಯನವರೇ ರೈತರ ಬಗ್ಗೆ ಕಳಕಳಿ ಇದ್ದರೆ ಇಷ್ಟು ಹಣ ನೀವು ಕೊಡಿ ಎಂದು ಸವಾಲು ಎಸೆದರು.
ರೈತರು ಸಂಕಷ್ಟದಲ್ಲಿದ್ದಾಗ ವಿಮೆ ಹಣ ಬಿಡುಗಡೆ ಮಾಡಿಸಲಾಯಿತು. ಮುಳುಗುತ್ತಿದ್ದ ಕೆಸಿಸಿ ಬ್ಯಾಂಕ್ ಪುನರುಜ್ಜಿವನಗೊಳಿಸಲಾಗಿದೆ. ಹಾವೇರಿಯಲ್ಲಿ ಹಾಲು ಉತ್ಪಾದಕರ ಟಕ ಮಾಡಿ 80 ಸಾವಿರ ಲೀಟರ್ ಇದ್ದ ಹಾಲು ಉತ್ಪಾದನೆಯನ್ನು 1.80 ಲಕ್ಷ ಲೀಟರ್ಗೆ ಹೆಚ್ಚಿಸಲಾಗಿದೆ. ಸಾವಿರಕ್ಕಿಂತ ಹೆಚ್ಚು ಹಸು ವಿತರಣೆ ಮಾಡಲಾಗಿದೆ. ಇದರಿಂದ ರೈತರ ಉತ್ಪನ್ನ ಹೆಚ್ಚಾಗಿದೆ ಎಂದರು.
ಕ್ಷೇತ್ರದಲ್ಲಿ ಎಲ್ಲ ಜನಾಂಗ, ಧರ್ಮದವರ ದೇವಸ್ಥಾನ, ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಜಾತಿ, ಮತ ಭೇದ ಇಲ್ಲದೇ ಅಭಿವೃದ್ಧಿ ಮಾಡಿದ್ದೇವೆ. ಇದರ ಬಗ್ಗೆ ಅನುಮಾನ ಇದ್ದರೆ ಸಿಎಂ ಬಹಿರಂಗ ಚರ್ಚೆಗೆ ಬರಲಿ ಎಂದು ಬೊಮ್ಮಾಯಿ ಅವರು ಆಹ್ವಾನ ನೀಡಿದರು.
Check Also
ಅಭಿವೃದ್ಧಿ ಚರ್ಚೆಗೆ ಬನ್ನಿ ಸಿಎಂ ಸಿದ್ದರಾಮಯ್ಯಾಗೆ ಸವಾಲು ಹಾಕಿದ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ
Spread the loveಹುಬ್ಬಳ್ಳಿ: ನಮ್ಮ ಆಡಳಿತದ ಅವಧಿಯಲ್ಲಿ ಏನು ಅಭಿವೃದ್ಧಿ ಕಾರ್ಯ ಆಗಿವೆ ತಮ್ಮ ಅಧಿಕಾರದ ಅವಧಿಯಲ್ಲಿ ಏನು ಅಭಿವೃದ್ಧಿ …