ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಬಹು ಗಂಭೀರವಾಗಿ ಜನರನ್ನು ಬಾಧಿಸುತ್ತಿದ್ದು, ಈ ಕಾಯಿಲೆಯಿಂದಾಗುವ ಮೃತ್ಯು ಪ್ರಮಾಣದಲ್ಲಿ ಭಾರತವು ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವುದು ಆತಂಕದ ಸಂಗತಿ ಎಂದು ಸ್ವರ್ಣ ಗ್ರೂಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ನಗರದ ಬಾಲಾಜಿ ಆಸ್ಪತ್ರೆ ವತಿಯಿಂದ ಸ್ಟೋಕ್ ಕುರಿತು ಜನಜಾಗತಿ ಮೂಡಿಸಲು ಹಮ್ಮಿಕೊಂಡಿದ್ದ ವಾಕಥಾನೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರು, ವಯಸ್ಕರು ಸೇರಿದಂತೆ ಎಲ್ಲ ವರ್ಗದ ಜನರಲ್ಲಿ ಕಂಡು ಬರುತ್ತಿರುವ ಪಾರ್ಶ್ವವಾಯು ಕಾಯಿಲೆಯು ಅನೇಕರ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ. ಕೆಲವರಲ್ಲಿ ಶಾಶ್ವತ ಅಂಗವೈಕಲ್ಯ ಉಂಟು ಮಾಡುತ್ತಿದೆ ಎಂದರು.
ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ, ಆರೋಗ್ಯಕರ ಆಹಾರ ಸೇವನೆ ಮೂಲಕ ಕಾಯಿಲೆ ಬರದಂತೆ ದೇಹಾರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಮಾತನಾಡಿ, ಪಾರ್ಶ್ವವಾಯು ಉಂಟಾಗಲು ಹಲವಾರು ಕಾರಣಗಳಿದ್ದರೂ ಮುಖ್ಯವಾಗಿ ಅನಿಯಂತ್ರಿತ ರಕ್ತದೊತ್ತಡ, ಮಧುಮೇಹ, ಅಧಿಕ ಬೊಜ್ಜು, ವ್ಯಾಯಾಮ ರಹಿತ ಜೀವನ, ಆರೋಗ್ಯದ ನಿಷ್ಕಾಳಜಿ, ಒತ್ತಡದ ದಿನಚರಿಯಿಂದಾಗಿ ಯುವಕರೂ ಸಹ ಇದಕ್ಕೆ ತುತ್ತಾಗುವಂತಾಗಿದೆ ಎಂದರು.
ಐ.ಎಂ.ಎ. ಹುಬ್ಬಳ್ಳಿ ಟಕದ ಅಧ್ಯ ಡಾ. ಪ್ರಭು ಬಿರಾದಾರ, ಕನಕದಾಸ ಶಿಣ ಸಂಸ್ಥೆಯ ಸಂದೀಪ ಬೂದಿಹಾಳ, ಸೆಂಟ್ ಫಾಲ್ಸ್ ಶಾಲೆಯ ಫಾದರ್ ಜೋಸೆಫ್, ಹಿರಿಯ ನಾಗರಿಕರ ಸಂದ ಎಂ.ಕೆ. ನಾಯ್ಕರ್, ಶಂಕರಗೌಡ್ರು, ಗುರುಪಾದ ಕಮ್ಮಾರ, ವಿವಿಧ ಕಾಲೇಜಿನ ವಿದ್ಯಾಥಿರ್ಗಳು, ಸಂಸ್ಥೆಗಳ ಪದಾಧಿಕಾರಿಗಳು, ಬಾಲಾಜಿ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ಆಸ್ಪತ್ರೆ ಆವರಣದಿಂದ ಆರಂಭವಾದ ಜಾಥಾ ವಿದ್ಯಾನಗರ ಶಿರೂರು ಪಾರ್ಕ್, ಆರ್ಟ್ಸ್ ಕಾಲೇಜು, ಕಿಮ್ಸ್, ಎಂವಿಪಿ ಎದುರಿನ ತಿಮ್ಮಸಾಗರ ರಸ್ತೆ ಮುಖಾಂತರ ಸಾಗಿ ಆಸ್ಪತ್ರೆ ಆವರಣದಲ್ಲಿ ಸಮಾರೋಪಗೊಂಡಿತು.
ಪಾರ್ಶ್ವವಾಯು ಸಮಸ್ಯೆಗೆ ಕಾರಣ ಮತ್ತು ಅದರಿಂದ ಪಾರಾಗುವ ವಿಧಾನಗಳ ಕುರಿತ ಮಾಹಿತಿ ಕಿರುಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು.
ಪಾರ್ಶ್ವವಾಯು ಸಮಸ್ಯೆಗೆ ಕಾರಣ ಮತ್ತು ಅದರಿಂದ ಪಾರಾಗುವ ವಿಧಾನಗಳ ಕುರಿತ ಮಾಹಿತಿ ಕಿರುಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು.
