ಹುಬ್ಬಳ್ಳಿ : ಇಂದು ರಾಣಿ ಚೆನ್ನಮ್ಮ ವೃತ್ತದಲ್ಲಿ ಹುಬ್ಬಳ್ಳಿ ಗೃಹರಕ್ಷಕ ದಳದಿಂದ ಭ್ರಷ್ಟಾಚಾರ ನಿರ್ಮೂಲನಾ ದಿನಾಚರಣೆಯನ್ನು ಆಚರಿಸಲಾಯಿತು.
ಸಹಾಯಕ ಪೊಲೀಸ್ ಆಯುಕ್ತರಾದ ಉಮೇಶ್ ಚಿಕ್ಕಮಠ ಅವರು ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಸಮಾಜದ ಮುಖಂಡರಾದ ಸುರೇಶ್ ಗೋಕಾಕ್ ಅವರು ಪಥಸಂಚಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗೃಹ ರಕ್ಷಕ ದಳದ ಹಿರಿಯ ಪ್ಲಟೂನ್ ಕಮಾಂಡರ್ ಕೃಷ್ಣಾ ಎಚ್. ಬ್ಯಾಡಗಿ, ಘಟಕದ ಇನ್ನಿತರ ಅಧಿಕಾರಿಗಳು,ಗೃಹ ರಕ್ಷಕರು, ಗೃಹ ರಕ್ಷಕಿಯರು ಭಾಗವಹಿಸಿದ್ದರು.