Breaking News

ವಿಮಾನದಲ್ಲಿ ಪ್ರಯಾಣಿಸುವ ಕನಸು ನನಸು ಮಾಡಿಕೊಂಡ ಅನಾಥ ಮಕ್ಕಳು

Spread the love

ಹುಬ್ಬಳ್ಳಿ: ಅನಾಥ ಮಕ್ಕಳಲ್ಲಿ ಆತ್ಮಸ್ಥೆರ್ಯ ಹೆಚ್ಚಿಸುವ ಸಪ್ಪೋಂ ಕೀ ಉಡಾನ್ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಯಿತು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಸಪ್ಪೋಂ ಕೀ ಉಡಾನ್ ಕಾರ್ಯಕ್ರಮದಡಿ ನಗರದ ಸೇವಾ ಭಾರತಿ ಟ್ರಸ್ಟ್ ನ ಅನಾಥ ಹಾಗೂ ನಿರ್ಗತಿಕ 15ಮಕ್ಕಳು ಹಾಗೂ ಇಬ್ಬರು ಮಾತೆಯರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದರು.
ಹುಬ್ಬಳ್ಳಿಯ ರೌಂಡ್ ಟೇಬಲ್-37ರ ಆಶ್ರಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದ ಪ್ರಾಯೋಕತ್ವವವನ್ನು ಪಾಲಿಕೆ ಮಾಜಿ ಮೇಯ‌ರ್ ವೀರಣ್ಣ ಸವಡಿ ಹಾಗೂ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ವಹಿಸಿದ್ದರು. ರೌಂಡ್ ಟೇಬಲ್-37ರ ಅಧ್ಯಕ್ಷೆ ಡಾ. ಅಪೂರ್ವಾ ಪಾಟೀಲ ಹಾಗೂ ಡಾ. ವಿವೇಕ ಪಾಟೀಲ ನೇತೃತ್ವವಹಿಸಿದ್ದರು.
ಅನಾಥ ಮಕ್ಕಳು ಬೆಂಗಳೂರಿನ ನೆಹರು ಪ್ಲಾನೆಟ್‌ನಲ್ಲಿ ಬಾನುವಾರ ಆಯೋಜಿಸಿದ್ದ ವಿಜ್ಞಾನ ವಿಷಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸೇವಾ ಭಾರತಿಯಲ್ಲಿ ಆಶ್ರಯ ಪಡೆದು ಸುಂದರ ಬದುಕಿನ ಕನಸು ಕಾಣುತ್ತಿರುವ ಅನಾಥ ಮಕ್ಕಳಲ್ಲಿ ಈ ಬಾನಂಗಳ ಹಾರಾಟ ಹೊಸ ಚೈತನ್ಯ, ಹುಮ್ಮಸ್ಸು ಮೂಡಿಸಿದಂತಾಯಿತು ಎಂದರೆ ತಪ್ಪಾಗಲಾರದು.
ಕೇಂದ್ರ ಸರ್ಕಾರ ಅನಾಥ ಹಾಗೂ ನಿರ್ಗತಿಕ ಮಕ್ಕಳಿಗಾಗಿ ಆಯೋಜಿಸಿರುವ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ತಾವು ಸಹ ಒಂದು ಭಾಗವಾಗುವ ಅವಕಾಶ ಕಲ್ಪಿಸಿಕೊಟ್ಟ ರೌಂಡ್‌ ಟೇಬಲ್‌ಗೆ ಅಭಿನಂದನೆ ಸಲ್ಲಿಸುತ್ತೇವೆ. ಬಾನೆತ್ತರದಲ್ಲಿ ಹಾರಾಡುವ ವಿಮಾನದಲ್ಲಿ ತಾವು ಯಾವಾಗ ಪ್ರಯಾಣಿಸುವುದು ಎಂದು ಮಕ್ಕಳು ಸಹಜವಾಗಿ ಕನಸು ಕಾಣುತ್ತಾರೆ. ಅವರ ಕನಸನ್ನು ನನಸಾಗಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಮಾಜಿ ಮೇಯರ್ ವೀರಣ್ಣ ಸವಡಿ ಹೇಳಿದರು.
ಬೆಂಗಳೂರಿನ ನೆಹರು ಪ್ಲಾನೆಟ್, ವಿಧಾನಸೌಧ, ಹೈಕೋರ್ಟ್, ಕಬ್ಬನ್ ಪಾರ್ಕ್ ಸೇರಿ ಮತ್ತಿತರ ಪ್ರದೇಶಗಳಿಗೆ ಕೊಂಡೊಯ್ದು ವಿವಿಧ ರೀತಿಯ ತಿಳಿವಳಿಕೆ ನೀಡುವ ಈ ಕಾರ್ಯಕ್ರಮ ನಿಜಕ್ಕೂ ಅನಾಥ ಮಕ್ಕಳ ಬದುಕಿನಲ್ಲಿ ಆಶಾ ಭಾವನೆ ಮತ್ತಷ್ಟು ಹೆಚ್ಚಿಸಲಿದೆ ಎಂಬುದು ನಿಸ್ಸಂಶಯ ಎಂದರು. ಹುಬ್ಬಳ್ಳಿ ಧಾರವಾಡ ಮಹಾನಗರ ಬಿಜೆಪಿ ಅಧ್ಯಕ್ಷತಿಪ್ಪಣ್ಣ ಮಜ್ಜಗಿ, ಉದ್ಯಮಿ ಡಾ.ಎಸ್ ವಿ. ಪ್ರಸಾದ ಇದ್ದರು.


Spread the love

About Karnataka Junction

    Check Also

    ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಕಣದಲ್ಲಿ ಮುಂದುವರೆಯಲು ನಿರ್ಧಾರ ?

    Spread the loveಹುಬ್ಬಳ್ಳಿ: .ಶಿಗ್ಗಾವ ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದ್ದು ಯಾವುದೇ …

    Leave a Reply

    error: Content is protected !!