Breaking News

ಅಭಿವೃದ್ಧಿ ಕಾಮಗಾರಿಗೆ ಶಾಸಕ ಅಬ್ಬಯ್ಯ ಚಾಲನೆ

Spread the love

ಹುಬ್ಬಳ್ಳಿ: ಇಲ್ಲಿನ ಪೂರ್ವ ಕ್ಷೇತ್ರದ ವಾರ್ಡ್ ಸಂಖ್ಯೆ 62ರಲ್ಲಿ ಬರುವ ಮಂಟೂರ ರಸ್ತೆ ದಸ್ತಗಿರಿ ಕಾಲೋನಿಯಲ್ಲಿ ತೆರದ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕರು, ಸ್ಲಮ್ ಬೋರ್ಡ್ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೂರ್ವ ಕ್ಷೇತ್ರದಲ್ಲಿ ಮಂಟೂರ ರಸ್ತೆ ಭಾಗವಕ್ಕೆ ಅತ್ಯದಿಕ ಅನುದಾನದಲ್ಲಿ ಅಭಿವೃದ್ಧಿಕಾರ್ಯ ಮಾಡಲಾಗಿದೆ. ಅದರಂತೆ ಇನ್ನು ಹೆಚ್ಚಿನ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತರಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ. ಅಧಿಕಾರಿಗಳು ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಬೇಕು. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಗಮನ ಹರಸಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಶರೀಫ್ ಅದ್ವಾನಿ, ಮುಖಂಡರಾದ ಶರೀಫ್,ಅಶ್ಪಾಕ್ ಇಸಾದಾ, ಜಾಫರ್ ಶಾಬ್ದಿ, ಸುಮಿತ್ರಾ ಪೀಟರ್, ಅಕ್ಬರ್ ಅಂಗಡಿ, ನೂರ್, ರಿಯಾಜ್, ರಸೂಲ್, ನಸೀಮಾ, ವಹಾಬ್, ಜೈಲಾನಿ ಸೇರಿದಂತೆ ಅನೇಕರಿದ್ದರು.


Spread the love

About Karnataka Junction

    Check Also

    ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಕಣದಲ್ಲಿ ಮುಂದುವರೆಯಲು ನಿರ್ಧಾರ ?

    Spread the loveಹುಬ್ಬಳ್ಳಿ: .ಶಿಗ್ಗಾವ ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದ್ದು ಯಾವುದೇ …

    Leave a Reply

    error: Content is protected !!