https://youtu.be/lwxmfYiRdN0
ಹುಬ್ಬಳ್ಳಿ; ನಾಯಕತ್ವ ಬದಲಾವಣೆ ವಿಚಾರದಲ್ಲಿ ರೆಬೆಲ್ ಆಗಿದ್ದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ನೂ ಕಮೆಂಟ್ ಎಂದರು. ಮಾಧ್ಯಮದವರ ಎಲ್ಲ ಪ್ರಶ್ನೆಗಳಿಗೂ ಅವರು ‘ನೋ ಕಾಮೆಂಟ್ಸ್’ ಎಂದು ಮುಂದೆ ಸಾಗಲು ಯತ್ನಿಸಿದರು ನಂತರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಎಲ್ಲವನ್ನೂ ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ಅದು ಈಗ ಚರ್ಚೆ ಬೇಡಾ ಎಂದರು.
ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆಯನ್ನು ನೀಡಿದ್ದು ಹುಬ್ಬಳ್ಳಿ ರಾಮಲಿಂಗೇಶ್ವನಗರದಲ್ಲಿ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲ್ಲ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ನಿನ್ನೆ ಸುತ್ತೂರು ಶ್ರೀಗಳ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ ಶ್ರೀಗಳ ತಾಯಿ ನಿಧನರಾಗಿದ್ದರು. ಅದಕ್ಕೆ ಶ್ರೀಗಳನ್ನು ಭೇಟಿಯಾಗಲು ಹೋಗಿದ್ದೆ ಎಂದು ಹೇಳಿದರು