ಹುಬ್ಬಳ್ಳಿ ತಾಲೂಕಿನ ಬಿಡ್ನಾಳ ಗ್ರಾಮದ ಮನೆ ಮನೆಗಳಲ್ಲಿ ಸೋಮವಾರ ಅಂತಾರಾಷ್ಟ್ರೀಯವಾಗಿ ಯೋಗ ದಿನ ಆಚರಿಸಲಾಯಿತು.
ಆರೋಗ್ಯಯುತ ಜೀವನಕ್ಕಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕೋವೀಡ್ ನಿಯಮಗಳನ್ನ ಪಾಲಿಸುತ್ತಾ ಯೋಗದ ಆಯಾಮಗಳಾದ ಸೂರ್ಯ ನಮಸ್ಕಾರ, ಪ್ರಾಣಾಯಾಮ ಸೇರಿದಂತೆ ಅನೇಕ ಯೋಗ ಪ್ರಯೋಗಗಳನ್ನು ಪ್ರಾತ್ಯಕ್ಷಿಕೆ ಮೂಲಕ ಹೇಳಿಕೊಡುವ ಮೂಲಕ ಯೋಗ ನಡೆಸಿ ಕೊಡಲಾಯಿತು. ಸ್ಥಳೀಯ ಮುಖಂಡರು, ಯೋಗಪಟಳು ಸ್ಥಳೀಯರು ಮುಂತಾದವರು ಪಾಲ್ಗೊಂಡಿದ್ದರು. ನಂತರ ಯೋಗದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಸಹ ಮೂಡಿಸಲಾಯಿತು. ಮಹಾಮರಿ ಕೋವೀಡ್ ಮೂರನೇ ಅಲೆ ಆತಂಕ ಹಿನ್ನೆಲೆಯಲ್ಲಿ ಮಕ್ಕಳಿಗೆ ಈಗಿನಿಂದಲೇ ಯೋಗದಂತಹ ಆರೋಗ್ಯ ಕ್ರೀಡೆ, ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಯೋಗ ಪಟುಗಳು ಅಭಿಪ್ರಾಯಪಟ್ಟರು.
