ಹುಬ್ಬಳ್ಳಿ; ಮಹಾಮಾರಿ ಕೋವೀಡ್ ಹಾವಳಿ ಹಿನ್ನೆಲೆಯಲ್ಲಿ ಸೋಮವಾರ
ಸಬ್ ಜೈಲ್ ಹತ್ತಿರ ನೃಪತುಂಗ ಬೆಟ್ಟದ ಪಿರಮಿಡ್ ಧಾನ್ಯಮಂದಿರದಲ್ಲಿ,
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಚಾಲನೆ ನೀಡಿದರು.
ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಆಯುಷ್ಯ ಮ್ಮಾನ ಇಲಾಖೆ ಹಾಗೂ ಪಿರಾಮಿಡ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಯೋಗ ದಿನಾಚರಣೆಯಲ್ಲಿ ಯೋಗ ಗುರು ಸಂಗಮೇಶ ನಿಂಬರಗಿ ಯೋಗದ ವಿವಿಧ ಆಯಾಮ ಹೇಳಿಕೊಟ್ಟರು.
ಜಿ.ಪಂ. ಸಿ.ಇ.ಓ ಡಾ.ಬಿ.ಸುಶೀಲ, ಹು-ಧಾ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಯಶವಂತ ಮದೀನಕರ್, ಜಿಲ್ಲಾ ಆಯುಷ್ಯಾಧಿಕಾರಿ ಡಾ.ಮೀನಾಕ್ಷಿ, ತಹಶಿಲ್ದಾರರ ಶಶಿಧರ ಮಾಡ್ಯಾಳ ಭಾಗವಹಸಿದ್ದರು.
ಯೋಗ ಶಿಕ್ಷಕ ಸಂಗಮೇಶ್ ನಿಂಬರಗಿ ಯೋಗಾಸನಗಳ ಕ್ರಮಗಳ ಕುರಿತು ನಿರ್ದೇಶನ ನೀಡಿ, ಅವುಗಳ ಸಚಿವ ಶೆಟ್ಟರ್ ಮಾಡಿದ್ದು ವಿಶೇಷವಾಗಿತ್ತು.
