ಹುಬ್ಬಳ್ಳಿ;; ಗೂಗಲ್ ಸರ್ಚ್‌ನಲ್ಲಿ ದೊರೆತ ಫೋನ್‌ಪೇ ಸಹಾಯ ವಾಣಿ ನಂಬರ್‌ಗೆ ಕರೆ ಮಾಡಿದ ಗೋಪನಕೊಪ್ಪದ ಶಶಿಕಲಾ ಎಂಬುವವರು ಫೋನ್ ಪೇ ಸಹಾಯ ವಾಣಿ ನಂಬರ್‌ಗೆ ಕರೆ ಮಾಡಿ ವಂಚಕನಿಂದ ನೋಸ ಹೋಗಿ ಆನ್‌ಲೈನ್‌ನಲ್ಲಿ ₹48 ಸಾವಿರ ಕಳೆದುಕೊಂಡಿದ್ದಾರೆ.
ಶಶಿಕಲಾ ಅವರು ತಮ್ಮ ಯೂನಿಯನ್ ಬ್ಯಾಂಕ್ ಫೋನ್ ಪೇ ಖಾತೆಯಿಂದ ಇಂಡಿಯನ್ ಬ್ಯಾಂಕ್ ಫೋನ್ ಪೇ ಖಾತೆಗೆ ₹10 ಸಾವಿರ ವರ್ಗಾಯಿಸಿದ್ದರು. ಹಣ ಕಡಿತವಾಗಿದ್ದೂ, ವರ್ಗಾವಣೆಯಾಗಿರಲಿಲ್ಲ. ಗೂಗಲ್‌ನಲ್ಲಿ ದೊರೆತ ಸಹಾಯವಾಣಿಗೆ ಕರೆ ಮಾಡಿದಾಗ, ಹಣ ಮರಳಿಸುವುದಾಗಿ ಹೇಳಿದ ವಂಚಕ, ಹಣ ವರ್ಗಾವಣೆಯಾದ ಐಡಿ ಹಾಗೂ ಬ್ಯಾಂಕ್ ಖಾತೆಗೆ ನೊಂದಣಿಯಾದ ಮೊಬೈಲ್ ನಂಬರ್ ಪಡೆದು ಲಿಂಕ್ ಕಳುಹಿಸಿದ್ದಾನೆ. ಅದನ್ನು ಕ್ಲಿಕ್ ಮಾಡಲು ಹೇಳಿ, ಯುಪಿಐ ಪಿನ್ ಹಾಕಿ ಸಬ್‌ಮೀಟ್ ಮಾಡಲು ಹೇಳಿ, ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …