Breaking News

ಕಂಬಾರಗಣವಿ ಸೇತುವೆ ಮುಳುಗಡೆ

Spread the love

ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಅಳ್ನಾವರ ತಾಲೂಕಿನ ಕಂಬಾರಗಣವಿ ಸೇತುವೆ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ಥಗೊಂಡಿದೆ.
ಕಳೆದ ಐದಾರು ದಿನಗಳಿಂದ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು, ಹೊಲ, ಗದ್ದೆಗಳಿಂದ ನೀರು ಹೊರಬರುತ್ತಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಅದೇ ರೀತಿ ವಿಪರೀತ ಮಳೆಯಿಂದಾಗಿ 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕಂಬಾರಗಣವಿ ಸೇತುವೆ ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದೆ.
ಈ ಸೇತುವೆ ಜಲಾವೃತವಾದರೆ ಆಕಡೆ ಜನ ಆಕಡೆ, ಈ ಕಡೆ ಜನ ಈ ಕಡೆ ನಿಲ್ಲುವ ಪರಿಸ್ಥಿತಿದೆ. ಇದೆ. ಹಲವಾರು ವರ್ಷಗಳಿಂದ ಈ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಒತ್ತಾಯ ಇದ್ದರೂ ಆ ಕಾರ್ಯ ಮಾತ್ರ ಇನ್ನೂ ಕೈಗೂಡಿಲ್ಲ.
ನೀರಿನ ರಭಸಕ್ಕೆ ಮರದ ಕೊಂಬೆಗಳು ಸಹ ತೇಲಿ ಬಂದು ಬ್ರಿಜ್ ಮೇಲೆ ನಿಂತಿವೆ. ಇದರಿಂದ ನೀರಿನ ಹರಿವು ಕಡಿಮೆಯಾಗುವವರೆಗೂ ಜನ ನಿಂತ ಜಾಗದಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಿದೆ.


Spread the love

About Karnataka Junction

[ajax_load_more]

Check Also

*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ‌ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ

Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …

Leave a Reply

error: Content is protected !!