Breaking News

ಹುಬ್ಬಳ್ಳಿ ಪೊಲೀಸರಿಂದ ನಟೋರಿಯಸ್ ರೌಡಿ ‘ಬಚ್ಚಾಖಾನ್’ ಬಂಧನ

Spread the love

ಹುಬ್ಬಳ್ಳಿ:ನಟ ದರ್ಶನ್ ಅವರ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗುವ ವೇಳೆ ಕುಖ್ಯಾತ ರೌಡಿ ಹೆಸರು ಕೇಳಿ ಬಂದಿತ್ತು. ನಟೋರಿಯಸ್ ರೌಡಿ ಬಚ್ಚಾ ಖಾನ್ ಇದ್ದ ಸೆಲ್‌ಗೆ ನಟ ದರ್ಶನ್ ಅವರನ್ನು ಸ್ಥಳಾಂತರಿಸಲಾಗುತ್ತದೆ ಎಂಬ ಮಾತು ಕೇಳಿದ್ದಢ ಬಂದಿದೆ. ಆ ನಟೋರಿಯಸ್ ರೌಡಿ ಬಚ್ಚಾ ಖಾನ್ ಪೆರೋಲ್ ಮೇಲೆ ಹೊರಗಿದ್ದ, ಇದೀಗ ಆತನನ್ನು ಬೆಂಗಳೂರಿನಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ವಿಐಪಿ ಸೆಲ್‌ನಲ್ಲಿ ಇದ್ದ ಈತ ಇತ್ತೀಚೆಗೆ ಪೆರೋಲ್ ಪಡೆದು ಹೊರ ಬಂದಿದ್ದ. ಕೊಲೆ ಸಂಚು ಆರೋಪದಲ್ಲಿ ನಟೋರಿಯಸ್ ರೌಡಿ ಬಚ್ಚಾ ಖಾನ್ ಹಾಗೂ ಆತನ ಗ್ಯಾಂಗ್‌ ಅನ್ನು ರಾಜಧಾನಿಯಲ್ಲಿ ಪೊಲೀಸರು ಬಂಧಿಸಿದ ಘಟನೆ ಬುಧವಾರ ನಡೆದಿದೆ.
ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಈ ಬಚ್ಚಾಖಾನ್ ಅನ್ನು ಬಳ್ಳಾರಿಯ ವಿಐಪಿ ಬ್ಯಾರೆಕ್ ನಲ್ಲಿ ಇರಿಸಲಾಗಿತ್ತು. ಆತ ಪೆರೋಲ್ ಪಡೆದು ಹೊರ ಬಂದು ಮತ್ತೆ ಹಳೇ ಚಾಳಿ ಮುಂದುವರೆಸಿದ್ದ. ಹುಬ್ಬಳ್ಳಿಯಲ್ಲಿ ಮತ್ತೊಬ್ಬರಿಗೆ ಈ ಬಚ್ಚಾಖಾನ್ ಹಾಗೂ ಆತನ ಗ್ಯಾಂಗ್ ಹತ್ಯೆ ಬೆದರಿಕೆ ಹಾಕಿತ್ತು. ಆತನ ಹುಡುಕಾಟದಲ್ಲಿದ್ದ ಹುಬ್ಬಳ್ಳಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಹುಬ್ಬಳ್ಳಿಯಲ್ಲಿ 2020ರಲ್ಲಿ ಫ್ರೂಟ್ ಇರ್ಫಾನ್ ಎಂಬುವವನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೌಡಿಗೆ ಶಿಕ್ಷೆ ವಿಧಿಸಲಾಗಿತ್ತು. ಹೀಗಾಗಿ ಜೈಲು ಸೇರಿದ್ದ ಈತ ಪೆರೋಲ್ ಮೇಲೆ ಹೊರಗಿದ್ದ. ಇದೀಗ ಮತ್ತೆ ಕೊಲೆ ಬೆದರಿಕೆ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ.


Spread the love

About Karnataka Junction

    Check Also

    ಅಂತರರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧನ- ಪೊಲೀಸ್ ಕಮೀಷನರ್ ಶಶಿಕುಮಾರ್

    Spread the loveಅಂತರರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧನ- ಪೊಲೀಸ್ ಕಮೀಷನರ್ ಶಶಿಕುಮಾರ್ ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ಗಾಂಜಾ …

    Leave a Reply

    error: Content is protected !!