Breaking News

ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ

Spread the love

ಹುಬ್ಬಳ್ಳಿ.ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಮುಂದಿನ ವಾರ ನಡೆಯಲಿರುವ ಗಣಪತಿ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಮಹಾನಗರದಲ್ಲಿ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡುವ ದೃಷ್ಟಿಯಿಂದ ನಗರದಲ್ಲಿ ಸರ್ವಧರ್ಮದ ಶಾಂತಿ ಸಭೆ ಕರೆಯಲಾಗಿತ್ತು.
ದೇಶಪಾಂಡೆ ನಗರದ
ಸವಾಯಿ ಗಂಧರ್ವ ಹಾಲಲ್ಲಿ ನಡೆದ ಈ ಶಾಂತಿ ಸಭೆಯ ಸಾನಿಧ್ಯವನ್ನು ಹುಬ್ಬಳ್ಳಿಯ 3000 ಮಠದ ಜಗದ್ಗುರು ಗುರುಸಿದ್ದ ರಾಜಯೋಗ ಮಹಾಸ್ವಾಮಿಗಳು ವಹಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಯೇ ಎಮ್ ಇಂಡಸ್ಗೇರಿ. ಗಾರ್ಡನ್ ಪೇಟೆಯ ಧರ್ಮಗುರು
ಪೀರಾ ಖಾದ್ರಿ. ಮಹೇಂದ್ರ ಸಿಂಗ್ ಗುರುನಾಥ್ ಉಳ್ಳಿ ಕಾಶಿ ಸೇರಿದಂತೆ ಎಲ್ಲ ಸಮಾಜದ ಪ್ರಮುಖರು ಎ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ .ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ. ಉಪಸಿತರಿದ್ದು ಶಶಿಗೆ ನೀರ್ ಉಣಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಂತಿ ಸಮಿತಿ ಸಭೆಗೆ ಆಗಮಿಸಿದ ಪ್ರಮುಖರು ಮಾತನಾಡಿ ಮಹಾನಗರ ಶಾಂತಿಗೆ ಎಲ್ಲ ಸಮುದಾಯಗಳು ಕೂಡಿ ಹಬ್ಬ ಆಚರಿಸುತ್ತೇವೆ ಎನ್ನುವ ಭರವಸೆ ನೀಡುತ್ತೇವೆ
ಈಗಾಗಲೇ ಮಹಾನಗರದಲ್ಲಿ ಎಲ್ಲಾ ಹಬ್ಬಗಳನ್ನು ಎಲ್ಲ ಸಮಾಜದ ಜನರು ಕೂಡಿ ಶಾಂತಿಯಿಂದ ಯಾವುದೇ ಅಹಿತಕರ ಘಟನೆ ನಡೆದ ಹಾಗೆ ಆಚರಿಸುತ್ತೇವೆ ಮುಂದೆಯೂ ಹಾಗೆ ಆಚರಿಸುವ ಭರವಸೆ ನೀಡುತ್ತೇವೆ ಎಂದು ಮಾತನಾಡಿ ಭರವಸೆ ನೀಡಿದರು.


Spread the love

About Karnataka Junction

    Check Also

    ಗ್ರಾಹಕರಲ್ಲಿ ಗುಣಮಟ್ಟದ ವಸ್ತುಗಳ ಜಾಗೃತಿಗಾಗಿ ಕ್ವಾಲಿಟಿ ವಾಕ್‌

    Spread the loveಹುಬ್ಬಳ್ಳಿ: ಇಲ್ಲಿಯ ಬ್ಯೂರೋ ಆಫ್ ಇಂಡಿಯನ್ ಸ್ಟಶ್ಚಯಂಡರ್ಡ್ಸ್ (ಬಿಐಎಸ್‌) ಶಾಖೆ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಕ್ವಾಲಿಟಿ ವಾಕ್‌ಗೆ …

    Leave a Reply

    error: Content is protected !!