https://youtu.be/IiZUo3oJJbE
ಹುಬ್ಬಳ್ಳಿ : ಸಿಎಂ ಸ್ಥಾನ ಖಾಲಿ ಇಲ್ಲ ಎಂದು ಬೋರ್ಡ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ! ಹೀಗಂದವರು ಸಚಿವ ಜಗದೀಶ್ ಶೆಟ್ಟರ್. ಹುಬ್ಬಳ್ಳಿಯಲ್ಲಿ ಭಾನುವಾರ ದೇಶಪಾಂಡೆ ನಗರದ ಸರ್ಕ್ಯೂಟ್ ಹೌಸನಲ್ಲಿ ಸುದ್ದಿಗಾರರ ಜೊತೆಗೆ
ಮಾತನಾಡಿದ ಅವರು, ಅರವಿಂದ ಬೆಲ್ಲದ ಪೋನ್ ಕದ್ದಾಲಿಕೆ ಹಾಗೂ ರಾಜಕೀಯ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಅರವಿಂದ ಬೆಲ್ಲದ ಬಗ್ಗೆ ನಾನು ಎನೂ ಮಾತನಾಡುವುದಿಲ್ಲ, ಅವರ ವಿಚಾರ ರಾಜ್ಯಮಟ್ಟದಲ್ಲಿ ಚರ್ಚೆ ಆಗಿದೆ. ಯಾರಾದ್ರು ಕೆಮ್ಮಿದ್ರೆ ಅದಕ್ಕೆ ನಾನು ಹೊಣೆ ಆಗಬೇಕಾದ ಪರಿಸ್ಥಿತಿ ಬಂದಿದೆ. ಯಾರ ಯಾರ ಹಣೆಯಲ್ಲಿ ಎನೂ ಇದೆ ಅದು ಆಗುತ್ತೆ ಎಂದರು.
ಇನ್ನು ಅರವಿಂದ ಬೆಲ್ಲದ ಓವರ್ ಟೇಕ್ ಮಾಡ್ತಾ ಇದಾರೆ ಅನ್ನೋ ಪ್ರಶ್ನೆಗೆ ಅದು ಅವರ ಸ್ವಭಾವ ಆಗಿದೆ. ಸದ್ಯ ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿಯಿಲ್ಲ, ಸಿಎಂ ಸ್ಥಾನ ಖಾಲಿ ಇಲ್ಲ ಅಂತ ಬೋರ್ಡ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ ಎಂದರು.
ಶನಿವಾರ ಮುಖ್ಯಮಂತ್ರಿಗಳು ಅನ್ ಲಾಕ್ ಘೋಷಣೆ ಮಾಡಿದಾಗ ಧಾರವಾಡ ಬಿಟ್ಟು ಹೋಗಿದೆ. ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗಿದ್ದು, ಜಿಲ್ಲೆಯ ಸ್ಥಿತಿಗತಿ ಮಾಹಿತಿಯನ್ನು ರಾಜ್ಯ ಮಟ್ಟಕ್ಕೂ ಕಳಿಸಲಾಗಿದೆ. ಕಳೆದ ಏಳು ಹಾಗೂ ಹತ್ತು ದಿನಗಳ ಸರಾಸರಿ ತೆಗೆದರೂ ಧಾರವಾಡದಲ್ಲಿ ಪಾಸಿಟಿವಿಟಿ ದರ ಐಎಂಸಿಆರ್ ಪ್ರಕಾರ ಶೇ. 5ರೊಳಗಿದೆ. ಸ್ಟೇಟ್ ವಾರ್ ರೂಂ ಪ್ರಕಾರ ಧಾರವಾಡದಲ್ಲಿ ಪಾಸಿಟಿವಿಟಿ ದರ 5.7 ಇದೆ ಎಂದು ತೋರಿಸಲಾಗಿದ್ದರಿಂದ ಗೊಂದಲ ಆಗಿದೆ.
ಅನ್ ಲಾಕ್ ಪರಿಷ್ಕೃತ ಆದೇಶ ಸಂಜೆಯೊಳಗೆ ಬರುವ ಸಾಧ್ಯತೆ ಇದೆ. ಹುಬ್ಬಳ್ಳಿ ಧಾರವಾಡದ ಜನತೆ ಆತಂಕ ಪಡುವ ಅಗತ್ಯ ಇಲ್ಲ. ಹುಬ್ಬಳ್ಳಿ ಎಕನಾಮಿಕ್ ಹಬ್. ಅನ್ಲಾಕ್ ಆಗದಿದ್ದರೆ ಆರ್ಥಿಕ ಸಂಕಷ್ಟ ಹೆಚ್ಚಲಿದೆ. ಸರ್ಕಾರದ ಆದೇಶ ಬಂದ ಬಳಿಕ ಹೊಸ ಮಾರ್ಗಸೂಚಿ ಅನುಸಾರ ಪಾಲನೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಸೋಮವಾರದಿಂದ ಲಸಿಕಾ ಮೇಳ ಆರಂಭವಾಗಲಿದೆ. ಆದ್ಯತೆ ಮೇರೆಗೆ ಲಸಿಕಾಕರಣ ಮಾಡಲಾಗುತ್ತದೆ. ನಮ್ಮಲ್ಲೀಗ 50480 ಡೋಸ್ ಲಸಿಕೆ ಲಭ್ಯವಿದೆ. ಜೂ. 21ರಿಂದ ಜಿಲ್ಲೆಯಲ್ಲಿ ಲಸಿಕಾ ಮೇಳ ಆರಂಭಿಸಿ 27 ವಾರ್ಡ್ ಸೇರಿ 201 ಸೆಂಟರ್ ಗಳಲ್ಲಿ ಲಸಿಕಾ ಅಭಿಯಾನ ಮಾಡಲಾಗುತ್ತದೆ ಎಂದರು.
Check Also
ಮಳೆ ಹಾನಿ ಪರಿಹಾರ ನೀಡಲು ಸರ್ಕಾರ ಸದಾ ಸಿದ್ದ ಏನ್ ಹೆಚ್ ಕೋನರಡ್ಡಿ
Spread the love ಹುಬ್ಬಳ್ಳಿ; ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆ, ರಸ್ತೆ ಹಾಗೂ ಸೇತುವೆಗಳು …