ಹುಬ್ಬಳ್ಳಿ: ಸೋಮವಾರದಿಂದ ರಾಜ್ಯಾದ್ಯಂತ 16 ಜಿಲ್ಲೆಗಳನ್ನು ಅನ್ ಲಾಕ್ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಆದ್ರೆ ಶೇ. 4.01 ರಷ್ಟು ಪಾಸಿಟಿವ್ ಇದ್ರು ಅನ್ ಲಾಕ್ ಮಾಡಿಲ್ಲ. ಹೀಗಾಗಿ ಧಾರವಾಡ ಜಿಲ್ಲೆಯನ್ನ ಅನ್ಲಾಕ್ ಮಾಡಿ ಎಂದು ವರ್ತಕರ ಸಂಘ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು. ವರ್ತಕರ ಬೇಡಿಕೆಗೆ ಸ್ಪಂದಿಸಿದ ಶೆಟ್ಟರ್ ಸಿಎಂ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು. ಸಿಎಂ ಗೆ ಕರೆ ಮಾಡಿ ವಾಸ್ತವ ಸ್ಥಿತಿಯನ್ನ ಹೇಳುತ್ತೇನೆ.
ಈಗಾಗಲೇ ಆರೋಗ್ಯ ಸಚಿವ ಸುಧಾಕರ್ ಜೊತೆಯೂ ಚರ್ಚೆ ಮಾಡಿದ್ದೇನೆ.ಮಧ್ಯಾಹ್ನದ ನಂತ್ರ ಡಿಸಿ ಮತ್ತು ಆರೋಗ್ಯ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಸರ್ಕಾರ 10 ದಿನಗಳ ಪಾಸಿಟಿವಿಟಿ ರೇಟಿಂಗ್ ತೆಗೆದುಕೊಂಡಿದ್ದೆ ಅನ್ಲಾಕ್ ಆಗದಿರಲು ಕಾರಣ. ಆದಷ್ಟು ಬೇಗ ಅನ್ ಲಾಕ್ ಮಾಡಿಸಲಾಗುವದು ಎಂದರು.
Check Also
ಮಳೆ ಹಾನಿ ಪರಿಹಾರ ನೀಡಲು ಸರ್ಕಾರ ಸದಾ ಸಿದ್ದ ಏನ್ ಹೆಚ್ ಕೋನರಡ್ಡಿ
Spread the love ಹುಬ್ಬಳ್ಳಿ; ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆ, ರಸ್ತೆ ಹಾಗೂ ಸೇತುವೆಗಳು …