https://youtu.be/hHJFTNgY804
ಹುಬ್ಬಳ್ಳಿ : ಪ್ರೊಫೈಲ್ ಫೋಟೋ ಬಳಸಿಕೊಂಡು ಫೇಸ್‌ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ದೋಚುತ್ತಿರುವ ಪ್ರಕರಣಗಳ ಸಂಖ್ಯೆ ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.
ಸೈಬರ್ ಖದೀಮರ ಜಾಲದೊಳಗೆ ಸಿಲುಕಿದ ಅಮಾಯಕರು ವಂಚನೆಗೊಳಗಾಗಿ ಲಕ್ಷಾಂತರ ಹಣ ಕಳೆದುಕೊಳ್ಳುತ್ತಿದ್ದಾರೆ.
ಜಿಲ್ಲೆಯಾದ್ಯಂತ ಫೇಸ್‌ಬುಕ್ ಮೂಲಕ ಗೆಳೆಯರನ್ನು ಸಾಲ ಕೇಳುವವರ ಸಂಖ್ಯೆ ಜಾಸ್ತಿಯಾಗಿದ್ದು, ಕಷ್ಟದಲ್ಲಿದ್ದಾನೆ ಎಂದು ಫೋನ್ ಫೇ, ಗೂಗಲ್ ಪೇ ಮೂಲಕ ಹಣ ಹಾಕಿ ಲಕ್ಷಾಂತರ ರೂ. ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಪೊಲೀಸರಿಗೂ ತಲೆ ನೋವು ತಂದಿದೆ.
ವಂಚನೆಗೊಳಗಾದವರ ನಿಖರ ಸಂಖ್ಯೆ ತಿಳಿಯದಿದ್ದರೂ ಅಂದಾಜಿನ ಪ್ರಕಾರ ಧಾರವಾಡ ಜಿಲ್ಲೆಯೊಂದರಲ್ಲಿಯೇ 15 ಸಾವಿರಕ್ಕೂ ಹೆಚ್ಚು ಜನರು ಮೋಸದ ಜಾಲಕ್ಕೆ ಈವರೆಗೆ ಹಣ ಕಳೆದುಕೊಂಡಿದ್ದಾರೆ.
ಪ್ರೊಫೈಲ್ ಫೋಟೋ ಬಳಸಿಕೊಂಡು ಫೇಸ್‌ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸುವ ಖದೀಮರು ನಕಲಿ ಖಾತೆ ಮೂಲಕ ಗೆಳೆಯರಿಗೆಲ್ಲಾ ರಿಕ್ವೆಸ್ಟ್ ಕಳುಹಿಸಿ ಮತ್ತೆ ಸ್ನೇಹಿತರಾಗಿ ಮೆಸೆಂಜರ್ ಮೂಲಕ ಹಣದ ಅವಶ್ಯಕತೆ ಇರುವ ಕುರಿತು ಮನವಿ ಮಾಡಿಕೊಳ್ಳುತ್ತಾರೆ. ಗೆಳೆಯ ಕಷ್ಟದಲ್ಲಿದ್ದಾನೆ ಎಂದು ನೆರವಿಗೆ ಮುಂದಾಗುವ ಸ್ನೇಹಿತರು ವಂಚನೆಗೆ ಬಲಿಯಾಗುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ನಕಲಿ ಖಾತೆಗಳ ಮೂಲಕ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ವಂಚಕರು ಕೆಲವರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿಕೊಂಡು ಅಂತಹವರ ಖಾತೆಗೆ ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದಾರೆ.
ಇನ್ನೂ ವಂಚನೆಗೊಳಗಾದ ಬಹುತೇಕರು ದೂರು ನೀಡುವುದಿಲ್ಲ. ಕೆಲವರು ಮಾತ್ರ ದೂರು ಸಲ್ಲಿಕೆ ಮಾಡುತ್ತಾರೆ.
ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕಾಗುತ್ತದೆ.
ಫೇಸ್‌ಬುಕ್‌ನಲ್ಲಿ ಲಿಂಕ್ ಕ್ಲಿಕ್ ಮಾಡುವಾಗ ಹುಷಾರಾಗಿರಬೇಕು. ಯಾವ ಲಿಂಕ್‌ನಲ್ಲಿ ಏನೇನು ಅಡಗಿದೆಯೋ ಎಂಬುದು ಗೊತ್ತಾಗುವುದಿಲ್ಲ. ಕೆಲವೊಂದು ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಮ್ಮ ಖಾತೆ ಹ್ಯಾಕ್ ಆಗುವ ಸಾಧ್ಯತೆಯೂ ಇದೆ. ಪಾಸ್‌ವರ್ಡ್ ಸ್ಟ್ರಾಂಗ್ ಆಗಿದ್ದರೆ ಖಾತೆಯೂ ಸುರಕ್ಷಿತವಾಗಿರುತ್ತದೆ.