ಹುಬ್ಬಳ್ಳಿ: ಧಾರವಾಡ ಜಿಲ್ಲೆಯಕುಂದಗೋಳ ಪಟ್ಟಣದ ಸಾದಗೇರಿ ಓಣಿಯಲ್ಲಿನ ಮನೆಯೊಂದು ಕುಸಿದ ಪರಿಣಾಮ ಆಟವಾಡಲು ತೆರಳಿದ್ದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ
ಅಮೃತಾ ಗದಿಗೆಪ್ಪ ಮೆಣಸಗೊಂಡ (5) ಮೃತಪಟ್ಟ ಬಾಲಕಿಯಾಗಿದ್ದಾಳೆ. ನಾಗರ ಪಂಚಮಿಯಂದು ಆಟವಾಡುವ ಸಲುವಾಗಿ ಬಾಲಕಿಯು ಪಕ್ಕದ ರಾಮಣ್ಣ ಕಾಳಪ್ಪ ಅರ್ಕಸಾಲಿ ಎಂಬುವವರ ಮನೆಗೆ ತೆರಳಿದ್ದಳು. ಇದೇ ಸಮಯ ಮಣ್ಣಿನ ಮೇಲ್ಚಾವಣಿ ಕುಸಿದ ಪರಿಣಾಮ ಬಾಲಕಿ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಈ ವೇಳೆ ಮಣ್ಣು ತೆಗೆದು ರಕ್ಷಿಸುವಷ್ಟರಲ್ಲಿ ಬಾಲಕಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಜೊತೆಗಿದ್ದ ನಿಹಾರಿಕಾ ಕಮ್ಮಾರ (2) ಬಾಲಕಿಗೆ ಸಣ್ಣ,ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಘಟನಾ ಸ್ಥಳಕ್ಕೆ ಬೇಟಿ ನೀಡಿದ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ತಕ್ಷಣ ಜಿಲ್ಲಾಡಳಿತಕ್ಕೆ ವರದಿ ನೀಡುವುದಾಗಿ ತಿಳಿಸಿದರು.
Check Also
ಅಂತರರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧನ- ಪೊಲೀಸ್ ಕಮೀಷನರ್ ಶಶಿಕುಮಾರ್
Spread the loveಅಂತರರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧನ- ಪೊಲೀಸ್ ಕಮೀಷನರ್ ಶಶಿಕುಮಾರ್ ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ಗಾಂಜಾ …