ಇಂದಿಗೂ ನುಸುಳುಕೋರರು ಭಾರತದದೊಳಗೆ ಸಲೀಸಾಗಿ ನುಗ್ಗುತ್ತಿದ್ದಾರೆ- ಕುಲಕರ್ಣಿ
ಹುಬ್ಬಳ್ಳಿ; ಇಂದಿಗೂ ನುಸುಳುಕೋರರು ಭಾರತದದೊಳಗೆ ಸಲೀಸಾಗಿ ನುಗ್ಗುತ್ತಿದ್ದಾರೆ ಎಂದುಶ್ರೀರಾಮ ಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ
ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು
ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಕೂಡಾ ದೇಶದ ಗಡಿಯಲ್ಲಿ ಸೂಕ್ತ ಭದ್ರತೆಯಿಲ್ಲ.
ಇಂದಿಗೂ ನುಸುಳುಕೋರರು ಭಾರತದದೊಳಗೆ ಸಲೀಸಾಗಿ ನುಗ್ಗುತ್ತಿದ್ದಾರೆ. ಇದನ್ನು ಸರ್ಕಾರ ತಡೆಯುವ ಕಾರ್ಯ ಮಾಡಬೇಕಿದೆ. ಗಡಿಯಲ್ಲಿ ಹೆಚ್ಚಿನ ಭದ್ರತೆ ನೀಡಬೇಕಿದೆ ಎಂದರು. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರು ಬಾಂಗ್ಲಾ ನಿವಾಸಿಗರಿಗೆ ಏನಾದರೂ ಸಮಸ್ಯೆ ಆದರೆ ನಮ್ಮಲ್ಲಿ ಆಶ್ರಯ ನೀಡುವುದಾಗಿ ಹೇಳಿದ್ದಾರೆ. ಹಾಗೇನಾದರೂ ಆಶ್ರಯ ನೀಡಿದ್ದೇ ಆದರೆ ಮುಂದಿನ ದಿನಗಳಲ್ಲಿ ದೀದಿ ಅವರು ಬೀದಿ ಪಾಲಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.