ಹುಬ್ಬಳ್ಳಿ: ಕಳೆದೊಂದು ವಾರದಿಂದ ಧಾರವಾಡ ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ದರ ಶೇ.4.1 ರ ಆಸುಪಾಸಿನಲ್ಲಿದ್ದರೂ ಅನ್ಲಾಕ್ ಆದ ಜಿಲ್ಲೆಗಳ ಪಟ್ಟಿಯಿಂದ ಹೊರಗಿಟ್ಟಿರುವುದು ನನಗೆ ಗೊತಿಲ್ಲ ಕಾರಣ ಮಧ್ಯಾಹ್ನದೊಳಗೆ ಲಾಕ್ ಡೌನ್ ಸಡಿಲಿಕೆ ಕೊನೆಗೂ ಸ್ಪಷ್ಟಪಡಿಸಿದ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಕೇಶ್ವಾಪುರದಲ್ಲಿ ಭಾನುವಾರ ಕರ್ನಾಟಕ ವಾಣಿಜ್ಯೋದ್ಯಮ ಮಂಡಳಿ ಪದಾಧಿಕಾರಿಗಳ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಅನ್ಲಾಕ್ 2.0 ಘೋಷಣೆ ಮಾಡುವಾಗ ಸಿಎಂ ಬಿ.ಎಸ್ ಯಡಿಯೂರಪ್ಪ 16 ಜಿಲ್ಲೆಗಳ ಪಟ್ಟಿ ಓದಿದ್ದರು. ಅದರಲ್ಲಿ ಧಾರವಾಡ ಇರಲಿಲ್ಲ. ಅನ್ಲಾಕ್ ಘೋಷಣೆ ಮಾಡುವಾಗ ಸಿಎಂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಧಾರವಾಡ ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗಿರುವ ಬಗ್ಗೆ ಡಿಸಿ ಸಿಎಂಗೆ ಮಾಹಿತಿ ನೀಡಿದ್ದರು. ಆದರೂ, ಸಿಎಂ ಅನ್ಲಾಕ್ ಜಿಲ್ಲೆಗಳ ಪಟ್ಟಿಯಲ್ಲಿ ಸೇರಿಸದಿರುವುದು, ಜಿಲ್ಲೆಯ ಜನ ಗೊಂದಲಕ್ಕೆ ಒಳಗಾಗುವಂತೆ ಮಾಡಿತ್ತು. ಈ ಬಗ್ಗೆ ಸಾರ್ವಜನಿಕ ವಲಯದ ಅಸಮಾಧಾನ ವ್ಯಕ್ತವಾಗಿತ್ತು.
ಧಾರವಾಡ ಜಿಲ್ಲೆಯ ಒಂದು ವಾರದ ಕೋವಿಡ್ ಪಾಸಿಟಿವಿಟಿ ದರ ಸಿಎಂ ಜಿಲ್ಲೆಗಳ ಹೆಸರು ಓದುವಾಗಿ ಏನೋ ತಪ್ಪಾಗಿ ಧಾರವಾಡದ ಹೆಸರು ಕೈಬಿಟ್ಟಿರಬಹುದು. ಜಿಲ್ಲೆಯಲ್ಲಿ ಅನ್ಲಾಕ್ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಪಾಸಿಟಿವಿಟಿ ದರದ ಬಗ್ಗೆ ಸರ್ಕಾರಕ್ಕೆ ಮತ್ತೊಮ್ಮೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ಸಹ ತಿಳಿಸಿತ್ತು. ಆದರೆ ಈ ಬಗ್ಗೆ 16 ಗಂಟೆಯಾದರು ಯಾವುದೇ ಆದೇಶ ಹೊರಬರಲಿಲ್ಲ ಈಗ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿ ಗಳ ಜೊತೆಗೆ ಮಾತುಕತೆ ಜೊತೆಗೆ ಅಧಿಕಾರಗಳ ಸಭೆ ಸಹ ಇಂದು ಕರೆದಿದ್ದಾರೆ ಎಂದರು.
Check Also
ತಪ್ಪು ಮಾಡಿದವರಿಗೆ ಹೊಟ್ಟೆಯುರಿ ಆಗಿದೆ: ನಾರಾಯಣಸ್ವಾಮಿ
Spread the love ಹುಬ್ಬಳ್ಳಿ: ‘ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ …