ಹುಬ್ಬಳ್ಳಿ: ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಅಲ್ಲದೇ ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ಈಗ ಮಳೆಯು ಕರ್ಫ್ಯೂಗೆ ಸಾಥ್ ನೀಡಿದಂತಾಗಿದೆ.
ಹೌದು.. ಇಂದು ಬೆಳಗ್ಗೆಯಿಂದ ಮತ್ತೆ ಜಿಟಿಜಿಟಿ ಮಳೆ
ಸುರಿಯುತ್ತಿದೆ. ವೀಕೆಂಡ್ ಕರ್ಪ್ಯೂ ಹಿನ್ನೆಲೆ ಹೋಟೆಲ್, ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿಲ್ಲ. ಅಲ್ಲದೇ ಜನ ಸಂಚಾರಕ್ಕೆ ಮಳೆಯು ಬ್ರೇಕ್ ಹಾಕಿದೆ.
ವರುಣನ ಅಬ್ಬರದಿಂದ ವ್ಯಾಪಾರ ವಹಿವಾಟುಗಳಿಗೆ ಅಡ್ಡಿಯಾಗಿದ್ದು, ಜಿಟಿಜಿಟಿ ಮಳೆಯಿಂದ ಅವಳಿ ನಗರದ ಜನ ಜೀವನ ಅಸ್ತವ್ಯಸ್ಥಗೊಂಡಿದೆ.