ಹೈದಾರಾಬಾದ್ : ದಕ್ಷಿಣ ಭಾರತದ ಸೂಪರ್ ಸ್ಟಾರ್, ನಟ ರಜಿನಿಕಾಂತ್ ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ಹಾರಿದ್ದಾರೆ. ಜೂನ್ 20ರಂದು ವಿಶೇಷ ವಿಮಾನದಲ್ಲಿ ತಮ್ಮ ಕುಟುಂಬದವರೊಂದಿಗೆ ಅಮೆರಿಕಾಗೆ ತೆರಳಿದ್ದಾರೆ. ಅವರು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂ ಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿವೆ.
ಚೆನ್ನೈನಿಂದ ದೋಹಾ ಮಾರ್ಗವಾಗಿ ಅವರು ಅಮೆರಿಕಾಗೆ ತಲುಪಲಿದ್ದಾರೆ ಎಂದು ತಿಳಿದು ಬಂದಿದ್ದು, ರಜನಿ ಮತ್ತು ಅವರ ಪತ್ನಿ ಲತಾ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಮೂತ್ರಪಿಂಡ ಶಸ್ತ್ರಚಿಕಿತ್ಸೆಗೊಳಗಾಗಿದ್ದ ರಜನಿಕಾಂತ್, ಇದೀಗ ಆರೋಗ್ಯ ತಪಾಸಣೆಗೋಸ್ಕರ ಅಮೆರಿಕಾಗೆ ತೆರಳಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಸದ್ಯ ಪ್ರಯಾಣಿಕ ವಿಮಾನಗಳು ಅಮೆರಿಕಾಗೆ ಹಾರಾಟ ನಡೆಸಲು ಇನ್ನೂ ಅನುಮತಿ ನೀಡಿಲ್ಲ. ಹೀಗಾಗಿ, ತಾವು ಯುಎಸ್‌ಗೆ ತೆರಳುವಂತೆ ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ರಜಿನಿಕಾಂತ್ ಮನವಿ ಮಾಡಿದ್ದರು. ಅವರಿಗೆ ಈಗಾಗಲೇ ಅನುಮತಿ ಸಿಕ್ಕಿರುವ ಕಾರಣ ಅಮೆರಿಕಾಗೆ ಪ್ರವಾಸ ಕೈಗೊಂಡಿದ್ದಾರೆ. ರಜಿನಿಕಾಂತ್ ಅವರ ಅಳಿಯ ಹಾಗೂ ನಟ ಧನುಷ್ ಸಿನಿಮಾ ಶೂಟಿಂಗ್‌ಗಾಗಿ ತಮ್ಮ ಪತ್ನಿ, ಪುತ್ರನೊಂದಿಗೆ ಈಗಾಗಲೇ ಅಮೆರಿಕಾದಲ್ಲಿದ್ದಾರೆ. ಇತರೆ ಕುಟುಂಬ ಸದಸ್ಯರೊಂದಿಗೆ ತಲೈವಾ ಕೂಡ ಯುಎಸ್‌ಗೆ ಪ್ರಯಾಣ ಮಾಡುತ್ತಿರು ವುದರಿಂದ ಇಡೀ ಕುಟುಂಬ ಅಲ್ಲೇ ಸಣ್ಣ ಗೆಟ್ ಟುಗೆದರ್ ಮಾಡಲಿದೆ.
Check Also
ಸಂಸ್ಕಾರ ಶಾಲೆಯ ಯುಕೆಜಿ ಮಕ್ಕಳ ಬಿಳ್ಕೋಡುಗೆ ಸಮಾರಂಭ
Spread the loveಹುಬ್ಬಳ್ಳಿ: ನಗರದ ಸಂಸ್ಕಾರ ಇಂಗ್ಲಿಷ್ ಮಿಡಿಯಂ ಶಾಲೆಯ ಯುಕೆಜಿ ಮಕ್ಕಳಿಗೆ ಬೀಳ್ಕೋಡುವ ಸಮಾರಂಭ ಇಂದು ಜರುಗಿತು. ಇದೇ …