Breaking News

ಕಲಘಟಗಿಯಲ್ಲಿ ಜಿಗಳಿ ಕೆರೆ ಒಡ್ಡು ಒಡೆದು ಜಮೀನುಗಳಿಗೆ ನುಗ್ಗಿದ ನೀರು….

Spread the love

https://youtu.be/pdL352Twzic
ಹುಬ್ಬಳ್ಳಿ; ಧಾರವಾಡ ಜಿಲ್ಲೆಯಾದ್ಯಂತ ಮಳೆರಾಯ ಅರ್ಭಿಟಿಸುತ್ತಿದ್ದು, ಹಳ ಕೋಳಗಳು ತುಂಬಿ ಹರಿಯುತ್ತಿವೆ, ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಮಳೆರಾಯ ಬಿಟ್ಟು ಬೀಡದೆ ಸುರಿಯುತ್ತಿದ್ದು, ಇದರಿಂದಾಗಿ ಹಲವು ಅವಾಂತರಗಳು ಸೃಷ್ಠಿಯಾಗಿವೆ, ಕಲಘಟಗಿ ತಾಲ್ಲೂಕಿನಲ್ಲಿ ಮಳೆರಾಯ ನಿರಂತರವಾಗಿ ಸುರಿಯುತ್ತಿದ್ದು, ಇದರಿಂದಾಗಿ ಹಟಕಿನಾಳ ಗ್ರಾಮದ ಜಿಗಳಿ ಕೆರೆ ಒಡ್ಡು ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ.
ಕೆರೆಯ ನೀರು ಜಮೀನುಗಳಿಗೆ ನುಗ್ಗಿದರಿಂದ ನೂರಾರು ಎಕರೆ ಬೆಳೆ ಈಗ ಸಂಪೂರ್ಣ ಜಲಾವೃತವಾಗಿದೆ. ಇನ್ನೂ ಜಲಾವೃತಗೊಂಡ ಕೃಷಿ ಭೂಮಿಯಲ್ಲಿ ರೈತರು ಭತ್ತ, ಸೋಯಾಬಿನ್, ಕಬ್ಬು, ಹತ್ತಿ, ಗೋವಿನಜೋಳ ಬೆಳೆಗಳು ಬೆಳೆದಿದ್ದರು. ಆದರೆ ಕಷ್ಟಪಟ್ಟು ಬೆಳದ ಬೆಳೆ ಈಗ ಮಳೆರಾಯನ ನೀರು ಪಾಲಾಗಿದ್ದು, ರೈತರನ್ನು ಈಗ ಮಳೆರಾಯ ಕಣ್ಣಿರು ಹಾಕುವಂತೆ ಮಾಡಿದ್ದಾನೆ. ಅಲ್ಲದೆ ಧಾರವಾಡ ಜಿಲ್ಲೆಯಾದ್ಯಂತ ಇಂದು ಕೂಡಾ ನಿರಂತರವಾಗಿ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಬಿತ್ತನೆ ಮಾಡಿದ ಮುಂಗಾರು ಬೆಳೆ ಎಲ್ಲಿ ಈ ವರ್ಷವು ನಮ್ಮ ಕೈ ತಪ್ಪುತದೇಯೋ ಎಂಬ ಆತಂಕ ಈಗ ಕಲಘಟಗಿ ಸೇರಿದಂತೆ ಜಿಲ್ಲೆಯ ರೈತರಲ್ಲಿಯು ಮನೆ ಮಾಡಿದೆ.


Spread the love

About Karnataka Junction

[ajax_load_more]

Check Also

ಸಮಾಜಮುಖಿ ಕಾರ್ಯದಲ್ಲಿ ಯುವಕರು ಪಾಲ್ಗೊಳ್ಳಲು ನಾಗರಾಜ್ ಗಬ್ಬೂರು ಸಲಹೆ

Spread the loveಹುಬ್ಬಳ್ಳಿ; ಮಹಾಶಿವರಾತ್ರಿ ಹಬ್ಬದ ನಂತರ ಅಂಗವಾಗಿ ಸಂಯೋಗ ಗೆಳೆಯರ ಬಳಗದವರು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು‌ ಸತತವಾಗಿ ಐದು …

Leave a Reply

error: Content is protected !!