https://youtu.be/s-0Y7PQczGs
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ನಗರದ ಬಹುತೇಕ ಕಡೆಗಳಲ್ಲಿ ಅವಾಂತರ ಸೃಷ್ಟಿಸುತ್ತಿದೆ.. ಸತತವಾಗಿ ಸುರಿದ ಮಳೆಗೆ ಮರವೊಂದು ಧರೆಗೆ ಉರುಳಿದ ಘಟನೆ ಭವಾನಿ ನಗರದ ಆಕೃತಿ ಅಪಾರ್ಟ್ ಮೆಂಟ್ ಪಕ್ಕದಲ್ಲಿ ನಡೆದಿದೆ. ಮರವು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಿತ್ಯ ನೂರಾರು ವಾಹನ ಸವಾರರ ಓಡಾಡುವ ರಸ್ತೆಯಲ್ಲಿಯೇ ಮರವು ನೆಲಕ್ಕೆ ಬಿದ್ದಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.
ಮಳೆ ಆಗುತ್ತಿದ್ದ ಪರಿಣಾಮ ಜನರ ಓಡಾಟ ವಿರಳವಿದ್ದಾಗ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭವಾನಿನಗರ- ದೇಶಪಾಂಡೆ ನಗರ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ.