ಮಳೆ, ಗಾಳಿ, ಚಳಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಕೇಶ್ವಾಪುರ ಪೂರ್ವ ಸಂಚಾರಿ ಪೋಲಿಸ್ ಠಾಣೆ ಸಿಬ್ಬಂದಿಗೆ ಮಹೇಂದ್ರ ಸಿಂಘಿ ನೇತೃತ್ವದಲ್ಲಿ ರೇನ್ ಕೋರ್ಟ್ ವಿತರಣೆ

Spread the love

https://youtu.be/UQTX_O0hfzg
ಹುಬ್ಬಳ್ಳಿ: ಮಳೆ, ಗಾಳಿ, ಚಳಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ನಗರದ ಕೇಶ್ವಾಪುರ ಪೂರ್ವ ಸಂಚಾರಿ ಪೋಲಿಸ್ ಠಾಣೆ ಸಿಬ್ಬಂದಿಗಳಿಗೆ ಸಿದ್ದಾರೋಢಮಠ ಟ್ರಸ್ಟ್ ಕಮಿಟಿ ಮುಖ್ಯಸ್ಥರಾದ ಮಹೇಂದ್ರ ಸಿಂಘಿ ನೇತೃತ್ವದಲ್ಲಿ ಸಮಾಜ ಸೇವಕ ಹಾಗೂ ಎಸ್.ಪಿ ಪ್ರೊಡಕ್ಷನ್ ಮಾಲೀಕ ಪಾರಸಮಾಲ್ ಬನ್ಸಾಲಿ, ಮನೋಜ ಬನ್ಸಾಲಿ ರೇನ್ ಕೋರ್ಟ್ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಮಹೇಂದ್ರ ಸಿಂಘಿ, ಕೋವಿಡ್ ಎರಡನೇ ಅಲೆಯಲ್ಲಿ ಹಗಲಿರುಳೆನ್ನದೆ ಸಂಚಾರ ಪೊಲೀಸರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಮಳೆಗಾಲ ಆರಂಭವಾಗಿದೆ. ಹೀಗಾಗಿ ಅವರಿಗೆ ಮಳೆಯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ಅನುವಾಗುವಂತೆ ರೇನ್ ಕೋಟ್ ವಿತರಿಸಲಾಗಿದೆ ಎಂದರು.
ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಎಸಿಪಿ ಎಂ.ಎಸ್. ಹೊಸಮನಿ ಮಾತನಾಡಿ, ಜನರ ಸೇವೆಗಾಗಿ ಮಳೆ, ಗಾಳಿ ಎನ್ನದೇ ಪೋಲಿಸ್ ಸಿಬ್ಬಂದಿಗಳು ದುಡಿಯುತ್ತಿದ್ದಾರೆ. ಅವರಿಗೆ ಮಳೆಗಾಲಕ್ಕೆ ಉಪಯುಕ್ತವಾಗುವ 50 ಕ್ಕೂ ಹೆಚ್ಚು ಜೆಲ್ ಕಂಪನಿಯ ರೆನ್ ಕೊರ್ಟ್ ನೀಡಿದ್ದಾರೆ ಅವರಿಗೆ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಎಸಿಪಿ ಎಂ.ಎಸ್. ಹೊಸಮನಿ, ಉತ್ತರ ವಲಯ ಎಸಿಪಿ ವಿನೋದ ಮುಕ್ತೇದಾರ, ಪಿಐ ಎನ್.ಸಿ. ಕಾಡದೇವರ, ಪಿಎಸ್ಐ, ಎಸ್.ಎಸ್.ದೇಸಾಯಿ, ಮಹೇಂದ್ರ ಜೈನ್, ಗೌತಮ್ ಗುಲೆಜ್, ಸುಭಾಸ ಡಂಗ್ ಸೇರಿದಂತೆ ಮುಂತಾದವರು ಇದ್ದರು.


Spread the love

Leave a Reply

error: Content is protected !!