ಕೊರೋನಾ ಇಳಿಮುಖ – ೬೪ ಕೋವಿಡ್ ಕೇಂದ್ರ ಸ್ಥಗಿತ

Spread the love

https://youtu.be/MFsEIR7TfEI

ಹುಬ್ಬಳ್ಳಿ.;ಕೊರೋನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಇಳಿಮುಖ ವಾಗುತ್ತಿರುವುದರಿಂದ ಜಿಲ್ಲೆಯಲ್ಲಿನ ೮೪ ಕೋವಿಡ್ ಕೇರ್ ಸೆಂಟರ ಪೈಕಿ ೬೪ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ.
ಏಪ್ರಿಲ್-ಮೇ ತಿಂಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿತ್ತು. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಎಷ್ಟೋ ಜನರು ಅಸುನೀಗಿದ್ದರು. ಜತೆಗೆ ಹೋಂ ಐಸೋಲೇಷನ್‌ನಲ್ಲಿ ಇರುವವರು ಹೊರಗೆ ಅಲೆದಾಡಿ ಸೋಂಕು ಹೆಚ್ಚಳಕ್ಕೆ ಕಾರಣರಾಗಿದ್ದರು. ಇದನ್ನು ಮನಗಂಡು ಜಿಲ್ಲಾಡಳಿತ ಸೋಂಕಿತರನ್ನು ಹೋಂ ಐಸೋಲೇಶನ್ ಮಾಡದೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಕೇಂದ್ರಗಳನ್ನು ತೆರೆಯಲಾಗಿತ್ತು.
ಹುಬ್ಬಳ್ಳಿ-ಧಾರವಾಡ ನಗರ- ೧೧, ಧಾರವಾಡ
ಗ್ರಾಮೀಣ- ೧೦, ಹುಬ್ಬಳ್ಳಿ ಗ್ರಾಮೀಣ- ೧೪, ಕಲಘಟಗಿ- ೧೨, ಅಣ್ಣಿಗೇರಿ-೮, ಕುಂದಗೋಳ-೧೬, ನವಲಗುಂದ -೮, ಅಳ್ನಾವರ-೫ ಹೀಗೆ ಒಟ್ಟು ೮೪ ಕೇಂದ್ರಗಳನ್ನು ತೆರೆಯಲಾಗಿತ್ತು. ಹೋಂ ಐಸೋಲೇಷನ್‌ನಲ್ಲಿದ್ದ ಕೆಲವರನ್ನು ಈ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಜೊತೆಗೆ ಮನೆಗಳಲ್ಲಿ ಪ್ರತ್ಯೇಕವಾಗಿ ವಾಸವಾಗಿರಲು ಅವಕಾಶ ಇಲ್ಲದ ಸೌಮ್ಯ ಲಕ್ಷಣಗಳಿರುವ ಸೋಂಕಿತರನ್ನು ಸಹ ದಾಖಲಿಸಲಾಗಿತ್ತು. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು ೨೦೧೧ ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
೨೦೧೧ ಸೋಂಕಿತರ ಪೈಕಿ ಈ ವರೆಗೆ ೧೯೪೦ ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದವರು ಬರೀ ೭೧ ಜನ ಮಾತ್ರ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಮಹಾನಗರದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅತಿ ಹೆಚ್ಚು ಎಂದರೆ ೩೯ ಸೋಂಕಿತರಿದ್ದರೆ, ೧೪ ಜನ ಧಾರವಾಡ ಗ್ರಾಮೀಣ ಭಾಗದಲ್ಲಿದ್ದಾಾರೆ. ಅಣ್ಣಿಗೇರಿ-೮, ಕುಂದಗೋಳ-೭, ನವಲಗುಂದ- ೩ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾಾರೆ. ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ೨೦ ಕೋವಿಡ್ ಕೇರ್ ಸೆಂಟರ್ ಬಿಟ್ಟು ಉಳಿದ ೬೪ ನ್ನು ಮುಚ್ಚಲಾಗಿದೆ. ಒಂದು ವೇಳೆ ಕೋವಿಡ್ ಕೇರ್ ಸೆಂಟರ್ ಮತ್ತೆ ಬೇಕೆನಿಸಿದರೆ ಪ್ರಾರಂಭಿಸಲಾಗುವುದು. ಆದರೆ ಸದ್ಯ ಇವುಗಳನ್ನು ಬಂದ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ಮಾಹಿತಿ ನೀಡಿದೆ.


Spread the love

About gcsteam

    Check Also

    10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ಗದ್ಯ ಪಾಠ ಕೈಬಿಟ್ಟಿಲ್ಲ

    Spread the loveಬೆಂಗಳೂರು: 10ನೇ ತರಗತಿ ಪಠ್ಯದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಪಾಠ ಕೈಬಿಡಲಾಗಿದೆ ಎಂಬ ಊಹಾಪೋಹಕ್ಕೆ …

    Leave a Reply