ಪೊಲೀಸರಿಗೆ ರಕ್ಷಣೆ ನೀಡಬೇಕಾದ ಸ್ಥಿತಿ ಹುಬ್ಬಳ್ಳಿಯಲ್ಲಿ ನಿರ್ಮಾಣ
ಹುಬ್ಬಳ್ಳಿ – ನಗರದ ಹೊಸೂರು ಕ್ರಾಸ್ ಕಾರ್ ನಲ್ಲಿ ಮಾಸ್ಕ್ ಧರಿಸದೇ ಕಾರನಲ್ಲಿ ತಿರುಗಾಡುತಿದ್ದ ಯುವಕನ ಕಾರ ವಶಕ್ಕೆ ಪಡೆಯಲು ಹೋದ ಪೊಲೀಸರ ಮೇಲೆ ಯುವನೋರ್ವ ಹಲ್ಲೆ ಮಾಡಿದ ಘಟನೆ ಶನಿವಾರ ನಡೆದಿದೆ.
ಉತ್ತರ ಪ್ರದೇಶ ರಾಜ್ಯದ ಗೋರಖಪುರ ಮೂಲದ ವೀರೇಂದ್ರ ಪ್ರಕಾಶ ಸಿಂಗ್ ಎಂಬ ಯುವಕ ಮಾಸ್ಕ್ ಇಲ್ಲದೇ ಕಾರ್ ನಲ್ಲಿ ಲಿಂಗರಾಜನಗರ ಕಡೆಗೆ ಹೊರಟಾಗ ಪೊಲೀಸರು ವಿಚಾರಣೆ ಮಾಡಿದ್ದಾರೆ.
ಈಗ ಸಮಯ ಎ಼ಷ್ಟಾಗಿದೆ, ಎಲ್ಲಿ ಹೋಗಿದ್ದಿರಿ ನಿಮ್ಮ ಹತ್ತಿರ ಪರವಾನಗಿ ಇದೆಯೇ ಎಂದು ಪೊಲೀಸ್ ಪೇದೆ ಶ್ರೀಶೈಲ್ ಸಂಗಪ್ಪ ನರಗುಂದ ಎಂಬುವವರಿಗೆ ನನ್ನ ಕಾರು ಏಕೆ ತಡೆಯುತ್ತಿರಿ , ನಿಮಗೆ ಏನು ಅಧಿಕಾರ ಇದೆ ಎಂದು ತುಟಿ ಭುಜಕ್ಕೆ ಹೊಡೆದಿದ್ದಾನೆ. ಇನ್ನೊಂದು ಹೆಜ್ಜೆ ಹೋಗಿ ಸಹ ಇನ್ನಷ್ಟು ಹಲ್ಲೆ ಮಾಡಲು ಮುಂದಾಗಿದ್ದಾನೆ.ತಕ್ಷಣ ಹೆಚ್ಚಿನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಈ ಕುರಿತು
ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ಮೇಲೆಯೇ ಈ ರೀತಿಯ ದುಷ್ಕರ್ಮಿಗಳು ಹಲ್ಲೆ ಮಾಡಿದರೆ ಪೊಲೀಸರ ಆತ್ಮ ಸ್ಥೈರ್ಯ ಕುಂದುತ್ತದೆ ಹಿರಿಯ ಪೊಲೀಸ್ ಅಧಿಕಾರಿಗಳು ಇಂತಹವರ ಮೇಲೆ ಕಠಿಣ ಕ್ರಮ ಅಗತ್ಯವಾಗಿದೆ.