https://youtu.be/dtGpMP7cemA
ಹುಬ್ಬಳ್ಳಿ; ಮಹಾಮಾರಿ ಕೋವೀಡ್ ಹಾವಳಿ ಕಡಿಮೆಯಾಗುತಿದ್ದಂತೆ ಅನ್ ಲಾಕ್ ಎರಡನೇ ಹಂತದಲ್ಲಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಸರ್ಕಾರದ ನಿಯಮ ಅನ್ವಯವಾಗುವಂತೆ
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಬಸ್ ಸಂಚಾರ ಆರಂಭಕ್ಕೆ ಈಗ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
ಈಗಾಗಲೇ ವಾಯವ್ಯ ಸಾರಿಗೆ ಸಂಸ್ಥೆಯ ಶೇ.95 ಸಿಬ್ಬಂದಿಗೆ ಮೊದಲನೇ ಹಂತದ ಕೋವಿಡ್ ಲಸಿಕೆ ಪಡೆದಿದ್ದು, ಕೇಲವರು ಎರಡನೇ ಹಂತದ ಕರ್ತವ್ಯಕ್ಕೆ ಸಿದ್ಧರಾಗಿದ್ದಾರೆ. ಲಸಿಕೆ ಪಡೆದವರನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಜೂ.21ರಿಂದ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಬಹುದೆಂಬ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಬಸ್‌ಗಳ ಸಂಚಾರಕ್ಕೆ ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣಾ ಭಾಜಪೇಯಿ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡರ ಮಾಹಿತಿ ನೀಡಿದ್ದು ಶೇ.80ಕ್ಕೂ ಹೆಚ್ಚು ಬಸ್ ಗಳನ್ನು ಸುಸ್ಥಿತಿಯಲ್ಲಿಡಲಾಗಿದೆ. ಚಾಲನಾ ಸಿಬ್ಬಂದಿ ಸದಾ ಜನರೊಂದಿಗೆ ಬೆರೆಯು ವುದರಿಂದ ಅವರ ಆರೋಗ್ಯ ದೃಷ್ಟಿಯಿಂದ ಲಸಿಕೆ ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರ ಸಾರಿಗೆ ನೌಕರರನ್ನು ಕೋವಿಡ್ ಫ್ರಂಟ್‌ಲೈನ್ ವಾರಿಯರ್ ಎಂದು ಪರಿಗಣಿಸಿದ ಪರಿಣಾಮ ಸಂಸ್ಥೆ ಕಚೇರಿಯಲ್ಲಿ ಲಸಿಕೆ ಅಭಿಯಾನ, ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಅವ ಧಿಯಲ್ಲಿ ಹೆಚ್ಚು ಸಿಬ್ಬಂದಿ ಲಸಿಕೆ ಪಡೆಯಲು ಸಹಕಾರಿಯಾಗಿದೆ ಎನ್ನುತ್ತಾರೆ ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣಾ ಭಾಜಪೇಯಿ.
ಸಂಸ್ಥೆಯಲ್ಲಿರುವ ಒಟ್ಟು 21,405 ಸಿಬ್ಬಂದಿ ಪೈಕಿ 18-44 ವಯಸ್ಸಿನ 12,484 ಸಿಬ್ಬಂದಿಯಲ್ಲಿ 11,063 (ಶೇ.88) ಸಿಬ್ಬಂದಿ ಮೊದಲ ಡೋಸ್ ಹಾಗೂ 478 (ಶೇ.4) ಸಿಬ್ಬಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂ 45 ವಯಸ್ಸು ಮೀರಿದ 8919 ಸಿಬ್ಬಂದಿ ಪೈಕಿ 8041 (ಶೇ.90) ಸಿಬ್ಬಂದಿ ಮೊದಲ ಡೋಸ್ ಹಾಗೂ 921 (ಶೇ.10) ಸಿಬ್ಬಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಒಟ್ಟಾರೆ 19,021 ಸಿಬ್ಬಂದಿ ಮೊದಲ ಡೋಸ್ ಪಡೆದಿದ್ದು, 2384 ಸಿಬ್ಬಂದಿ ಲಸಿಕೆ ಪಡೆಯಬೇಕಾಗಿದೆ. ಹೀಗಾಗಿ ಮೊದಲ ಹಾಗೂ ಎರಡನೇ ಡೋಸ್ ಸೇರಿದಂತೆ ಒಟ್ಟು 22,390 ಡೋಸ್‌ಗಾಗಿ ಬೇಡಿಕೆ ಸಲ್ಲಿಸಲಾಗಿದೆ.
ಕರ್ತವ್ಯ ನಿಯೋಜನೆಗೆ ಸಿಬ್ಬಂದಿಗೆ ಕೋವಿಡ್ ಲಸಿಕೆ ಪ್ರಮಾಣಪತ್ರ ಕಡ್ಡಾಯಗೊ ಳಿಸಲಾಗಿದ್ದು ಕೆಲ ಸಿಬ್ಬಂದಿ ಲಸಿಕೆ ಪಡೆದರೂ ದೂರದ ಊರುಗಳಲ್ಲಿರುವ ಕಾರಣ ತಮ್ಮ ಘಟಕಗಳಿಗೆ ಮಾಹಿತಿ ನೀಡಿಲ್ಲ. ಆದರೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ತಮ್ಮ ಘಟಕಗಳಿಗೆ ಲಸಿಕೆ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.
ಟೆಸ್ಟ್ ಮಾಡಿಸಿದ ಕೋವಿಡ್ ಪ್ರಮಾಣ ಪತ್ರ ವರದಿಯನ್ನು ಕೂಡ ತರಬೇಕು. ಕರ್ತವ್ಯನಿತರ ಸಿಬ್ಬಂದಿ ತಮ್ಮೊಂದಿಗೆ ಒಂದು ಲಸಿಕೆ ಪ್ರಮಾಣ ಪತ್ರ ಇಟ್ಟುಕೊಂಡಿರಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡರ ಹೇಳಿದರು
ಆರಂಭದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಬಹುದು. ಹೀಗಾಗಿ ಹೆಚ್ಚಿನ ಸಿಬ್ಬಂದಿಯ ಬೇಡಿಕೆ ಇರುವುದಿಲ್ಲ. ನಷ್ಟದ ಹೊರೆ ತಗ್ಗಿಸಲು ಆರಂಭದಲ್ಲಿ ಪ್ರಯಾಣಿಕರ ಬೇಡಿಕೆ ಆಧಾರದ ಮೇಲೆ ಮಾತ್ರ ಬಸ್‌ಗಳನ್ನು ಓಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇರುವುದಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಹಿರಿಯ ಸಿಬ್ಬಂದಿ ಆರೋಗ್ಯ ದೃಷ್ಟಿಯಿಂದ ಅವರಿಗೆ ರಜೆ ಪಡೆಯುವ ಆಯ್ಕೆ ನೀಡಲಾಗಿದೆ. 55 ವರ್ಷ ಮೇಲ್ಪಟ್ಟ ಸಿಬ್ಬಂದಿ ರಜೆ ಬಯಸಿದರೆ ಅವರಿಗೆ ರಜೆ ಮಂಜೂರು ಮಾಡಬೇಕು ಎಂದು ಎಲ್ಲಾ ಘಟಕ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.