ಜೂನ್ 16 ರಂದು ಬೃಹತ್ ಪ್ರಮಾಣದ ಚಕ್ಕಡಿ ಓಡಿಸುವ ಸ್ಪರ್ಧೆ
ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಉಣಕಲ್ ಗ್ರಾಮದ ವತಿಯಿಂದ ಜೂನ್ 16 ರಂದು ಮಧ್ಯಾಹ್ನ 3 ಕ್ಕೆ
ತಾಲೂಕಿನ ಹೆಬಸೂರು ಗ್ರಾಮದಿಂದ ಪ್ರಾರಂಭ ಆಗಿ ಬ್ಯಾಹಟ್ಟಿ, ಸುಳ್ಳ ಮತ್ತು ಶಿವಳ್ಳಿ ಮಾರ್ಗವಾಗಿ ಹೆಬ್ಬಳ್ಳಿ ರಸ್ತೆಯಲ್ಲಿನ ಉಣಕಲ್ ಗ್ರಾಮದ ಶ್ರೀ ಸಾಂಗ್ಲಿ ಗಣಪತಿ ದೇವಸ್ಥಾನದವರೆಗೆ ಬೃಹತ್ ಪ್ರಮಾಣದಲ್ಲಿ ಚಕ್ಕಡಿ ಓಡಿಸುವ ಸ್ಪರ್ಧೆಯನ್ನ ಆಯೋಜಿಸಲಾಗಿದೆ.
ಸ್ಪರ್ಧೆಯನ್ನ ಹೆಬಸೂರು ಶ್ರೀ ಸಿದ್ಧಾರೂಡ ಮಠದ ಶ್ರೀ ಸಿದ್ಧಯ್ಯಾ ಸ್ವಾಮೀಗಳು ಉದ್ಘಾಟನೆ ಮಾಡುವರು, ಮುಖ್ಯ ಅತಿಥಿಯಾಗಿ ಉಣಕಲ್ ಗ್ರಾಮದ ಹಿರಿಯರಾದ ಚೆನ್ನಪ್ಪಗೌಡ ಪಾಟೀಲ್, ರಮೇಶ್ ಕಾಂಬಳೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಿಗೆ, ರಾಜಣ್ಣ ಕೊರವಿ, ರಾಮಣ್ಣ ಕೊಕಾಟಿ ಮುಂತಾದವರು ಆಗಮಿಸುವರು.
ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 50 ಸಾವಿರ, ದ್ವೀತಿಯ ಬಹುಮಾನ40 ಸಾವಿರ, ಮೂರನೇ ಬಹುಮಾನ 30 ಸಾವಿರ ,ನಾಲ್ಕನೇ ಬಹುಮಾನ 20 ಸಾವಿರ ಹಾಗೂ ಐದನೇ ಬಹುಮಾನ 10 ಸಾವಿರ ಕೊಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.